ಭವದ ಬೆಳಕಿನ ಭಗವದ್ಗೀತೆ -5

ಭವದ ಬೆಳಕಿನ ಭಗವದ್ಗೀತೆ - 5

ಶ್ಲೋಕ ೯
ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ ।
ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ॥೯॥

ಪದ ವಿಭಾಗ
ಅನ್ಯೇ ಚ ಬಹವಹಾ ಶೂರಾಃ ಮದರ್ಥೇ ತ್ಯಕ್ತ ಜೀವಿತಾಃ ನಾನಾ ಶಸ್ತ್ರ ಪ್ರಹರಣಾಃ ಸರ್ವೇ ಯುದ್ಧ ವಿಶಾರದಾಃ

ಪದಶಃ ಅರ್ಥ
ಅನ್ಯೇ = ಮತ್ತು, ಬಹವಹಾಃ = ಬಹಳ ಶೂರಾ, ವೀರ ಯೋಧರು, ನಾನಾ ಶಸ್ತ್ರ ಪ್ರಹರಣಾಃ = ಅನೇಕ ಬಗೆಯ ಶಸ್ತ್ರಾಗಳ ಸಮೇತ ಮದರ್ಥೇ = ನನಗೋಸ್ಕರ, ತ್ಯಕ್ತ ಜೀವಿತಾಃ = ಜೀವನದ ಹಂಗನ್ನೇ ತೊರೆದಿರುವ, ಸರ್ವೇ = ಇವರೆಲ್ಲರೂ, ಯುದ್ಧ = ಯುದ್ಧದಲ್ಲಿ, ವಿಶಾರದಾಃ = ನಿಪುಣರು.

ಸಾಮಾನ್ಯ ತಾತ್ಪರ್ಯ
ನನಗೋಸ್ಕರವಾಗಿ ಜೀವದ ಆಸೆಯನ್ನು ತ್ಯಾಗ ಮಾಡುವಂತಹ ಮತ್ತು ಬಹಳಷ್ಟು ಪರಾಕ್ರಮಿಗಳು ಅನೇಕ ಪ್ರಕಾರದ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತರಾಗಿದ್ದಾರೆ ಮತ್ತು ಅವರೆಲ್ಲರೂ ಯುದ್ಧದಲ್ಲಿ ಚತುರರು.

ಶ್ಲೋಕ ೧೦
ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ ।
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ॥೧೦॥

ಪದ ವಿಭಾಗ
ಅಪರ್ಯಾಪ್ತಂ ತತ್ ಅಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಂ ಪರ್ಯಾಪ್ತಂ ತು ಇದಂ ಏತೇಷಾಂ ಬಲಂ ಭೀಮಾಭಿರಕ್ಷಿತಂ

ಪದಶಃ ಅರ್ಥ
ಭೀಷ್ಮಾಭಿರಕ್ಷಿತಂ = ಭೀಷ್ಮ ಪಿತಾಮಹರಿಂದ ರಕ್ಷಿಸಲ್ಪಟ್ಟ, ಅಸ್ಮಾಕಂ = ನಮ್ಮ, ತತ್ = ಆ ಬಲಂ ಸೈನ್ಯವೂ, ಅಪರ್ಯಾಪ್ತಂ = ಎಲ್ಲ ಪ್ರಕಾರದಲ್ಲೂ ಅಮಿತವಾಗಿದೆ, ತು = ಮತ್ತು, ಭೀಮಾಭೀರಕ್ಷಿತಂ = ಭೀಮನಿಂದ ರಕ್ಷಿಸಲ್ಪಟ್ಟ, ಏತೇಷಾಂ = ಇವರ, ಇದಂ = ಈ, ಬಲಂ = ಸೈನ್ಯವೂ, ಪರ್ಯಾಪ್ತಂ = ಪರಿಮಿತವಾಗಿದೆ.

ಸಾಮಾನ್ಯ ತಾತ್ಪರ್ಯ
ಭೀಷ್ಮ ಪಿತಾಮಹರಿಂದ ರಕ್ಷಿಸಲ್ಪಟ್ಟ ನಮ್ಮ ಸೈನ್ಯವೂ ಎಲ್ಲ ಪ್ರಕಾರದಿಂದ ಅಜೇಯವಾಗಿದೆ ಅಂದರೆ ಶಕ್ತಿ ಅಪರಿಮಿತವಾಗಿದೆ. ಮತ್ತು ಭೀಮನಿದ ರಕ್ಷಿಸಲ್ಪಟ್ಟ ಪಾಂಡವರ ಸೈನ್ಯವನ್ನು ಗೆಲ್ಲುವುದು ಸುಗಮವಾಗಿದೆ. ಅಂದರೆ ಪಾಂಡವರ ಸೈನ್ಯದ ಶಕ್ತಿ ಪರಿಮಿತವಾಗಿದೆ ಎಂದರ್ಥ.

ಶ್ಲೋಕ ೧೧
ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ ।
ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ ॥೧೧

ಪದ ವಿಭಾಗ
ಅಯನೇಷು ಚ ಸರ್ವೇಷು ಯಥಾ ಭಾಗಂ ಅವಸ್ಥಿತಾಃ ಭೀಷ್ಮಂ ಏವ ಅಭಿರಕ್ಷಂತು ಭವಂತಃ ಸರ್ವ ಏವ ಹಿ

ಪದಶಃ ಅರ್ಥ
ಚ = ಆದುದರಿಂದ, ಸರ್ವೇಷು = ಎಲ್ಲ, ಅಯನೇಷು = ಸುರಕ್ಷಿತವಾದ, ಯಥಾ ಭಾಗಂ = ನಿಮ್ಮ ನಿಮ್ಮ ನಿಶ್ಚಿತ ಭಾಗದಲ್ಲಿ, ಅವಸ್ಥಿತಾಃ = ಇದ್ದುಕೊಂಡು, ಭವಂತಃ = ನೀವುಗಳು, ಸರ್ವೇ ಏವ = ಎಲ್ಲರೂ, ಹಿ = ನಿಸ್ಸಂದೇಹವಾಗಿ, ಭೀಷ್ಮಂ ಏವ = ಭೀಷ್ಮ ಪಿತಾಮಹರನ್ನು, ಅಭಿರಕ್ಷಂತು = ಎಲ್ಲ ಕಡೆಗಳಲ್ಲೂ ರಕ್ಷಿಸಬೇಕು.

ಸಾಮಾನ್ಯ ತಾತ್ಪರ್ಯ
ಆದುದರಿಂದ ಎಲ್ಲ ಆಯಕಟ್ಟಿನ ಸುರಕ್ಷಿತವಾದ ನಿಮ್ಮ ನಿಮ್ಮ ಸ್ಥಳಗಳಲ್ಲಿ ಸಜ್ಜಾಗಿರುತ್ತ ನೀವುಗಳೆಲ್ಲ ಸಂದೇಹವಿಲ್ಲದಂತೆ ಭೀಷ್ಮ ಪಿತಾಮಹರನ್ನು ಎಲ್ಲ ಕಡೆಗಳಿಂದ ರಕ್ಷಣೆ ಮಾಡಿರಿ.

Leave a Reply

Your email address will not be published. Required fields are marked *

Related Post

ದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ :ದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ :

Shloka 9,10,11 ಭವದ ಬೆಳಕಿನ ಭಗವದ್ಗೀತೆ - 5 ಶ್ಲೋಕ ೯ ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ । ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ॥೯॥ ಪದ ವಿಭಾಗ ಅನ್ಯೇ ಚ ಬಹವಹಾ ಶೂರಾಃ ಮದರ್ಥೇ ತ್ಯಕ್ತ ಜೀವಿತಾಃ ನಾನಾ ಶಸ್ತ್ರ ಪ್ರಹರಣಾಃ ಸರ್ವೇ ಯುದ್ಧ ವಿಶಾರದಾಃ

ರಾಮಾಯಣ ಕಾಲದ ಅಳಿದುಳಿದ ಸ್ಮಾರಕ ಪಳೆಯುಳಿಕೆಗಳುರಾಮಾಯಣ ಕಾಲದ ಅಳಿದುಳಿದ ಸ್ಮಾರಕ ಪಳೆಯುಳಿಕೆಗಳು

Shloka 9,10,11 ಭವದ ಬೆಳಕಿನ ಭಗವದ್ಗೀತೆ - 5 ಶ್ಲೋಕ ೯ ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ । ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ॥೯॥ ಪದ ವಿಭಾಗ ಅನ್ಯೇ ಚ ಬಹವಹಾ ಶೂರಾಃ ಮದರ್ಥೇ ತ್ಯಕ್ತ ಜೀವಿತಾಃ ನಾನಾ ಶಸ್ತ್ರ ಪ್ರಹರಣಾಃ ಸರ್ವೇ ಯುದ್ಧ ವಿಶಾರದಾಃ

ಭವದ ಬೆಳಕಿನ ಭಗವದ್ಗೀತೆ – 4ಭವದ ಬೆಳಕಿನ ಭಗವದ್ಗೀತೆ – 4