ಭವದ ಬೆಳಕಿನ ಭಗವದ್ಗೀತೆ – 3

ಅಧ್ಯಾಯ ೧, ಶ್ಲೋಕ ೩
ಪಶ್ಯೈತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್।
ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ

ಪದ ವಿಭಾಗ
ಪಶ್ಯ ಏತಾಂ ಪಾಂಡುಪುತ್ರಾಣಾಂ ಆಚಾರ್ಯ ಮಹತೀಂ ಚಮೂಂ ವ್ಯೂಢಾಂ ದ್ರುಪದ ಪುತ್ರೇಣ ತವ ಶಿಷ್ಯೇಣ ಧೀಮತಾ

ಪದಶಃ ಅರ್ಥ
ಆಚಾರ್ಯ = ಎಲೈ ಆಚಾರ್ಯನೇ, ತವ = ತಮ್ಮ, ಧೀಮತಾ = ಬುದ್ಧಿವಂತನಾದ, ಶಿಷ್ಯೇಣ = ಶಿಷ್ಯನಾದ, ದ್ರುಪದ ಪುತ್ರೇಣ = ದ್ರುಪದ ರಾಜನ ಮಗ ದೃಷ್ಟದ್ಯುಮ್ನನ ಮೂಲಕ, ವ್ಯೂಹ = ವ್ಯೂಹಾಕಾರವಾಗಿ ನಿಲ್ಲಿಸಲ್ಪಟ್ಟಿರುವ, ಏತಾಂ = ಈ, ಪಾಂಡುಪುತ್ರಾಣಾಂ = ಪಾಂಡುಪುತ್ರರ, ಮಹತೀಂ = ಬಹುದೊಡ್ಡ, ಚಮೂಂ = ಸೈನ್ಯವನ್ನು, ಪಶ್ಯ = ನೋಡಿರಿ.

ತಾತ್ಪರ್ಯ
ಆಚಾರ್ಯರೇ ದ್ರುಪದನ ಪುತ್ರ ತಮ್ಮ ಬುದ್ಧಿಶಾಲೀ ಶಿಷ್ಯನಾದ ದೃಷ್ಟದ್ಯುಮ್ನನಿಂದ ವ್ಯೂಹಾಕಾರವಾಗಿ ನಿಲ್ಲಿಸಲಾಗಿರುವ ಪಾಂಡುಪುತ್ರರ ಈ ಬಹುದೊಡ್ಡ ಸೈನ್ಯವನ್ನು ನೋಡಿರಿ. ದ್ರೋಣರ ಶಿಷ್ಯ ದುಷ್ಟದ್ಯುಮ್ನ ದ್ರುಪದನ ಪುತ್ರ. ದ್ರುಪದ ಮತ್ತು ದ್ರೋಣರ ಕತೆ ಎಲ್ಲರಿಗೂ ತಿಳಿದಿರುವಂತಹುದೇ ಆಗಿದೆ. ಆದಾಗ್ಯೂ ಒಮ್ಮೆ ನೆನಪಿಸಿಕೊಳ್ಳೋಣ. ದ್ರುಪದ ಮತ್ತು ದ್ರೋಣರು ಬಾಲ್ಯ ಸ್ನೇಹಿತರು. ದ್ರುಪದ ರಾಜನಾದಮೇಲೆ ದ್ರೋಣನು ತನ್ನ ಮಗುವಿಗೆ ಹಾಲು ಕುಡಿಸಲು ಹಸುವನ್ನು ರಾಜ ದ್ರುಪದನಲ್ಲಿ ಕೇಳುತ್ತಾನೆ . ರಾಜ ಅಹಂಕಾರದಿಂದ ಅವಮಾನಿಸುತ್ತಾನೆ. ಅದರ ಸೇಡಿಗಾಗಿ ದ್ರೋಣ ಪಾಂಡವರನ್ನು ತರಬೇತಿಗೊಳಿಸೆ ದ್ರುಪದನನ್ನು ಸೆರೆಹಿಡಿದು ಅವನ ಅರ್ಧರಾಜ್ಯವನ್ನು ಕಿತ್ತುಕೊಂಡು ’ ನಿನಗೆ ಸಮನಾಗಿರುವೆ’ ಎಂದು ಸ್ನೇಹವನ್ನು ಕೇಳುತ್ತಾನೆ. ಈ ಕಾರಣಕ್ಕಾಗಿ ದ್ರುಪದ ದ್ರೋಣನನ್ನು ಕೊಲ್ಲಬಲ್ಲ ಶಕ್ತಿವಂತನಾದ ಮಗ ದುಷ್ಟದ್ಯುಮ್ನನನ್ನು ಹುಟ್ಟಿಸುತ್ತಾನೆ. ಮತ್ತು ಅವನನ್ನು ದ್ರೋಣನ ಬಳಿಯೇ ತರಬೇತಿಗೆ ಕಳುಹಿಸುತ್ತಾನೆ. ಹಾಗಾಗಿ ದ್ರೋಣರ ಶಿಷ್ಯ ದುಷ್ಟದ್ಯುಮ್ನ. ದುರ್ಯೋಧನ ’ನಿಮ್ಮ ಶಿಷ್ಯ’ ಎಂದು ಹೇಳುವುದರಲ್ಲಿ ವ್ಯಂಗ್ಯವನ್ನು ಕಾಣಬಹುದು.
ಶ್ಲೋಕ ೪
ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾಯುಧಿ |
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ

ಪದ ವಿಭಾಗ
ಅತ್ರ ಶೂರಾಃ ಮಹೇಷ್ವಾಸಾಃ ಭೀಮಾರ್ಜುನ ಸಮಾಃ ಯುಧಿ ಯುಯುಧಾನಹಃ ವಿರಾಟಃ ಚ ದ್ರುಪದಃ ಚ ಮಹಾರಥಃ

ಪದಶಃ ಅರ್ಥ
ಅತ್ರ = ಇದರಲ್ಲಿ ಅಂದರೆ ಈ ಸೈನ್ಯದಲ್ಲಿ, ಮಹೇಷ್ವಾಸಾಃ = ದೊಡ್ಡ ದೊಡ್ಡ ಧರ್ನುಧಾರಿಗಳು, ಯುಧೀ = ಯುದ್ಧದಲ್ಲಿ, ಭೀಮಾರ್ಜುನ ಸಮಾಃ = ಭೀಮ ಮತ್ತು ಅರ್ಜುನರಿಗೆ ಸಮಾನರಾದ, ಶೂರಾಃ = ಬಹಳ ಶೂರರಾದ, ಯುಯುಧಾನಃ = ಸಾತ್ಯಕಿ, ಚ = ಮತ್ತು, ವಿರಾಟಾಃ = ವಿರಾಟರಾಯ, ಚ = ಮತ್ತು, ಮಹಾರಥಃ = ಮಹಾರಥಿಯಾದ, ದ್ರುಪದಃ = ದ್ರುಪದ ರಾಜನು
ತಾತ್ಪರ್ಯ
ಮಹಾ ವೀರರಿರುವಂತಹ ಸೈನ್ಯವಿದು ಮತ್ತು ಎಲ್ಲರೂ ಭೀಮಾರ್ಜುನರಿಗೆ ಸಮನಾದವರು. ಸಾತ್ಯಕಿ ವಿರಾಟ ದ್ರುಪದ ಎಲ್ಲರೂ ಮಹಾ ವೀರರು. ದುರ್ಯೋಧನನ ಮಾನಸಿಕ ಸ್ಥೈರ್ಯ ಕುಂದಿದಂತೆ ಕಂಡುಬರುತ್ತದೆ ಈ ಸಾಲುಗಳಲ್ಲಿ.

ಶ್ಲೋಕ ೫
ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್ ।
ಪುರುಜಿತ್ ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ

ಪದ ವಿಭಾಗ
ದೃಷ್ಟ ಕೇತುಃ ಏಕಿತಾನಃ ಕಾಶಿ ರಾಜಃ ಚ ವೀರ್ಯವಾನ್ ಪುರುಜಿತ್ ಕುಂತಿ ಭೋಜಃ ಚ ಶೈಭ್ಯಃ ಚ ನರಪುಂಗವಃ

ಪದಶಃ ಅರ್ಥ
ದೃಷ್ಟಕೇತುಃ = ದೃಷ್ಟಕೇತುವು, ಚೇಕಿತಾನಃ = ಚೇಕಿತಾನಃ, ಚ = ಹಾಗೂ, ವೀರ್ಯವಾನ್ = ಬಲಶಾಲಿಯಾದ, ಕಾಶೀರಾಜಃ = ಕಾಶೀರಾಜ, ಪುರುಜಿತ್ = ಪುರುಜಿತ್ತು, ಕುಂತಿಭೋಜಃ = ಕುಂತಿಭೋಜನು, ಚ = ಮತ್ತು, ನರಪುಂಗವಃ = ಮಾನವ ಶ್ರೇಷ್ಠನಾದ, ಶೈಭ್ಯ = ಶೈಭ್ಯನು

ಶ್ಲೋಕ ೬
ಯುಧಾ ಮನ್ಯುಷ್ಚ ವಿಕ್ರಾಂತಃ ಉತ್ತೋಮಾಜಶ್ಚ ವೀರ್ಯಮಾನ್
ಸೌಭದ್ರೋ ದ್ರೋಪದೇಯಾಶ್ಚ ಸರ್ವ ಏವ ಮಹಾರಥಾಃ

ಪದ ವಿಭಾಗ
ಯುಧಾ ಮನುಹು ಚ ವಿಕ್ರಾಂತಃ ಉತ್ತಮ ಉಜಾಃ ಚ ವೀರ್ಯವಾನ್ ಸೌಭದ್ರಃ ದ್ರೌಪದೇಯಾಃ ಚ ಸರ್ವೇ ಏವ ಮಹಾರಥಾಃ

ಪದಶಃ ಅರ್ಥ
ಚ = ಮತ್ತು, ವಿಕ್ರಾಂತಃ = ಪರಾಕ್ರಮಿಯಾದ, ಯುಧಾಮನ್ಯುಹುಃ = ಯುಧಾಮನ್ಯು, ಚ = ಹಾಗೂ, ವೀರ್ಯವಾನ್ = ಬಲಶಾಲಿಯಾದ, ಉತ್ತಮೋಜಾಃ = ಉತ್ತಮ ಉಜಸ್ಸು, ಸೌಭದ್ರಾಃ = ಸುಭದ್ರೆಯ ಮಗ ಅಭಿಮನ್ಯು, ಚ = ಮತ್ತು, ದ್ರೌಪದೇಯಾಃ = ದ್ರೌಪದಿಯ ಐದು ಜನ ಮಕ್ಕಳು, ಸರ್ವೇ ಏವಾಃ = ಇವರೆಲ್ಲರೂ, ಮಹಾರಥಾಃ = ಮಹಾರಥರಾಗಿದ್ದಾರೆ ಅಂದರೆ ಅದ್ವಿತೀಯ ಪರಾಕ್ರಮಿಗಳಾಗಿದ್ದಾರೆ.

ತಾತ್ಪರ್ಯ
ಈ ಸೇನೆಯಲ್ಲಿ ದೊಡ್ಡ ದೊಡ್ಡ ಧರ್ನುಧಾರಿಗಳೂ ಹಾಗೂ ಯುದ್ಧದಲ್ಲಿ ಭೀಮಾರ್ಜುನರಿಗೆ ಸಮಾನರಾದ ಪರಾಕ್ರಮಿ ಸಾತ್ಯಕಿ ಮತ್ತು ವಿರಾಟ ಹಾಗೂ ಮಹಾರಥಿ ರಾಜ ದ್ರುಪದ, ದೃಷ್ಟಕೇತು ಮತ್ತು ಚೇಕಿತಾನ, ಹಾಗೂ ಬಲಶಾಲಿ ಕಾಶೀರಾಜ, ಪುರುಜಿತ್ತು, ಕುಂತೀ ಭೋಜ ಮತ್ತು ಮನುಷ್ಯರಲ್ಲಿ ಶ್ರೇಷ್ಠನಾದ ಶೈಭ್ಯ, ಪರಾಕ್ರಮಿ ಯುಧಾಮನ್ಯು, ಬಲಶಾಲಿಯಾದ ಉತ್ತಮೋಜ, ಸೌಭದ್ರೆಯ ಮಗನಾದ ಅಭಿಮನ್ಯು ಮತ್ತು ದ್ರೌಪದಿಯ ಐವರು ಪುತ್ರರು ಇವರೆಲ್ಲರೂ ಮಹಾರಥರು ಅಂದರೆ ಅದ್ವಿತೀಯ ಶೂರರು. ಪ್ರತಿಯೊಬ್ಬರ ಹೆಸರನ್ನು ಹೇಳುವಾಲ್ಲಿ ದುರ್ಯೋಧನನ ಭಯವನ್ನು ಗುರುತಿಸಬಹುದು. ಎದುರಿನಿಂತ ಸೈನ್ಯದ ಮಹಾ ರಥಿಕರನ್ನು ನೋಡಿ ಅಧೈರ್ಯಗೊಂಡಿದ್ದಾನೆ. ತನಗೆ ಸೋಲಾಗುವುದೇನೋ ಎಂಬ ಭೀತಿಯು ಕಾಡಿರಬಹುದು.

Leave a Reply

Your email address will not be published. Required fields are marked *

Related Post

ರಾಮಾಯಣ ಕಾಲದ ಅಳಿದುಳಿದ ಸ್ಮಾರಕ ಪಳೆಯುಳಿಕೆಗಳುರಾಮಾಯಣ ಕಾಲದ ಅಳಿದುಳಿದ ಸ್ಮಾರಕ ಪಳೆಯುಳಿಕೆಗಳು

ಅಧ್ಯಾಯ ೧, ಶ್ಲೋಕ ೩ಪಶ್ಯೈತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್।ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ ಪದ ವಿಭಾಗಪಶ್ಯ ಏತಾಂ ಪಾಂಡುಪುತ್ರಾಣಾಂ ಆಚಾರ್ಯ ಮಹತೀಂ ಚಮೂಂ ವ್ಯೂಢಾಂ ದ್ರುಪದ ಪುತ್ರೇಣ ತವ ಶಿಷ್ಯೇಣ ಧೀಮತಾ ಪದಶಃ ಅರ್ಥಆಚಾರ್ಯ = ಎಲೈ ಆಚಾರ್ಯನೇ, ತವ = ತಮ್ಮ, ಧೀಮತಾ = ಬುದ್ಧಿವಂತನಾದ,

ಭವದ ಬೆಳಕಿನ ಭಗವದ್ಗೀತೆ – 4ಭವದ ಬೆಳಕಿನ ಭಗವದ್ಗೀತೆ – 4

ಅಧ್ಯಾಯ ೧, ಶ್ಲೋಕ ೩ಪಶ್ಯೈತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್।ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ ಪದ ವಿಭಾಗಪಶ್ಯ ಏತಾಂ ಪಾಂಡುಪುತ್ರಾಣಾಂ ಆಚಾರ್ಯ ಮಹತೀಂ ಚಮೂಂ ವ್ಯೂಢಾಂ ದ್ರುಪದ ಪುತ್ರೇಣ ತವ ಶಿಷ್ಯೇಣ ಧೀಮತಾ ಪದಶಃ ಅರ್ಥಆಚಾರ್ಯ = ಎಲೈ ಆಚಾರ್ಯನೇ, ತವ = ತಮ್ಮ, ಧೀಮತಾ = ಬುದ್ಧಿವಂತನಾದ,

ಭವದ ಬೆಳಕಿನ ಭಗವದ್ಗೀತೆ -5ಭವದ ಬೆಳಕಿನ ಭಗವದ್ಗೀತೆ -5

https://secureservercdn.net/166.62.112.219/139.4a7.myftpupload.com/wp-content/uploads/2020/06/adhyaya-1-91011.mp3?time=1594059853 ಅಧ್ಯಾಯ ೧, ಶ್ಲೋಕ ೩ಪಶ್ಯೈತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್।ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ ಪದ ವಿಭಾಗಪಶ್ಯ ಏತಾಂ ಪಾಂಡುಪುತ್ರಾಣಾಂ ಆಚಾರ್ಯ ಮಹತೀಂ ಚಮೂಂ ವ್ಯೂಢಾಂ ದ್ರುಪದ ಪುತ್ರೇಣ ತವ ಶಿಷ್ಯೇಣ ಧೀಮತಾ ಪದಶಃ ಅರ್ಥಆಚಾರ್ಯ = ಎಲೈ ಆಚಾರ್ಯನೇ, ತವ = ತಮ್ಮ, ಧೀಮತಾ =