ಭವದ ಬೆಳಕಿನ ಭಗವದ್ಗೀತೆ – 2

 

ವಾಚನ ವ್ಯಾಖ್ಯಾನ - ಹೆಚ್ ಕೆ ಪ್ರಭಾ
ಲಿಪಿಕಾರರು - ವಿನುತಾ ಪಾಟೀಲ್

*********************

ಧೃತರಾಷ್ಟ್ರ ಉವಾಚ ।
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥೧॥

ಪದ ವಿಭಾಗ
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ ಯುಯುತ್ಸವಃ ಮಾಮಕಾಃ ಪಾಂಡವಾಃ ಚ ಏವ ಕಿಮ್ ಅಕುರ್ವತ ಸಂಜಯ -

ಪದಶಃ ಅರ್ಥ
ಧೃತರಾಷ್ಟ್ರ ಉವಾಚ - ಧೃತರಾಷ್ಟ್ರನು ಹೇಳಿದನು, ಸಂಜಯ - ಹೇ ಸಂಜಯ, ಧರ್ಮಕ್ಷೇತ್ರೇ, ಧರ್ಮಭೂಮಿಯಾದ, ಕುರುಕ್ಷೇತ್ರೇ- ಕುರುಕ್ಷೇತ್ರದಲ್ಲಿ , ಸಮವೇತಾಃ - ಸೇರಿರುವ, ಯುಯುತ್ಸವಃ ಯುದ್ಧಾಪೇಕ್ಷೆಯುಳ್ಳ, ಮಾಮಕಾಃ - ನನ್ನ, ಚ - ಮತ್ತು, ಪಾಂಡವಾಃ- ಪಾಂಡವರು, ಕಿಮ್- ಏನನ್ನು, ಅಕುರ್ವತ - ಮಾಡಿದರು.

ತಾತ್ಪರ್ಯ-
ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧದ ಬಯಕೆಯಿಂದ ನೆರೆದ ನನ್ನವರು ಮತ್ತು ಪಾಂಡವರು ಏನು ಮಾಡಿದರು ಸಂಜಯನೆ ? ರಾಜ್ಯದ ರಾಜನಾಗಿ ಧೄತರಾಷ್ಟ್ರನಿದ್ದಾನೆ, ಆದರೆ ಆತನಿಗೆ ಕಣ್ಣು ಕಾಣದು, ಎಲ್ಲವನ್ನೂ ಸಂಕೇತವೆಂದುಕೊಳ್ಳುವುದಕ್ಕಿಂತ ಕಣ್ಣು ಕಾಣದು ಎಂದೇ ಭಾವಿಸೋಣ, ಸಂಜಯನನ್ನು ಕುಳ್ಳರಿಸಿಕೊಂಡು ಯುದ್ಧದ ವಿವರಗಳನ್ನು ಕೇಳಿ ತಿಳಿದುಕೊಳ್ಳುವ ಹಂಬಲ ಅವನಿಗೆ. ಅದಕ್ಕಾಗಿ ಆತ ಸಂಜಯನನ್ನು ಕೇಳುತ್ತಾನೆ. ಧರ್ಮದ ಕ್ಷೇತ್ರವೆನ್ನುತ್ತಾನೆ, ಯಾವುದು ಧರ್ಮದ ಕ್ಷೇತ್ರ? ಭೂಮಿ ಎನ್ನುವ ಸತ್ಯವನ್ನು ಕಂಡಾಗ ಭೂಮಿಯೇ ಧರ್ಮದ ಕ್ಷೇತ್ರ. ಆದರೆ ಧರ್ಮವನ್ನು ಆಚರಿಸುವವರ ಮೇಲೆ ಭೂಮಿಯ ಮೇಲಿನ ಜನರನ್ನು ಧರ್ಮಿಗಳು ಅಥವಾ ಅಧರ್ಮಿಗಳು ಎಂದು ವಿಭಾಗಿಸಬಹುದಷ್ಟೆ. ಕ್ಷೇತ್ರ ಧರ್ಮವೇ ಆದರೆ ಧರ್ಮಿ ಅಧರ್ಮಿಗಳಿಂದ ಅದು ಧರ್ಮ ಕ್ಷೇತ್ರವೋ ಅಥವಾ ಅಧರ್ಮ ಕ್ಷೇತ್ರವೋ ಆಗುತ್ತದೆ. ಇಂತಹ ಭೂಮಿಯಲ್ಲಿ ರಣಕ್ಷೇತ್ರವಾಗಿರುವ ಯುದ್ಧ ಭೂಮಿಯಲ್ಲಿ ’ನನ್ನವರು’ ಮತ್ತು ಪಾಂಡುವಿನ ಮಕ್ಕಳು ಏನು ಮಾಡಿದರು ಎಂದು ಕೇಳುತ್ತಾನೆ. ರಾಜನಾದವನಿಗೆ ಇಬ್ಬರೂ ಒಂದೇ ಆಗಬೇಕಿತ್ತು. ಆದರೆ ಇಲ್ಲೂ ಧೃತರಾಷ್ಟ್ರ ವ್ಯಾಮೋಹವನ್ನು ಮತ್ತು ಪಾಂಡುವಿನ ಬಗೆಗಿನ ಅಸೂಯೆಯನ್ನೂ ತೋರಿಸುವಂತಿದೆ. ನನ್ನ ಮಕ್ಕಳು ಮತ್ತು ಪಾಂಡುವಿನ ಮಕ್ಕಳು ಏನು ಮಾಡುತ್ತಿದ್ದಾರೆ? ಎಂದು ಕೇಳುವಾಗ ಪಾಂಡವರು ಬೇರೆ ಎನ್ನುವ ಒಳಭಾವ ಒಡೆದು ಕಾಣುತ್ತದೆ.

ಸಂಜಯ ಉವಾಚ ।
ದೃಷ್ಟ್ವಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ।
ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ ॥೨॥

ಪದ ವಿಭಾಗ
ದೃಷ್ಟ್ವಾ ತು ಪಾಂಡವ ಅನೀಕಮ್ ವ್ಯೂಢಮ್ ದುರ್ಯೋಧನಃ ತದಾ ಆಚಾರ್ಯಮ್ ಉಪಸಂಗಮ್ಯ ರಾಜಾ ವಚನಮ್ ಅಬ್ರವೀತ್-
ಪದಶಃ ಅರ್ಥ - ತದಾ- ಆ ಸಮಯದಲ್ಲಿ, ರಾಜಾ- ರಾಜನಾದ, ದುರ್ಯೋಧನಃ- ದುರ್ಯೋಧನನು, ವ್ಯೂಢಂ - ವ್ಯೂಹಾಕಾರವಾಗಿ ರಚಿಸಲ್ಪಟ್ಟ, ಪಾಂಡವಾನೀಕಂ - ಪಾಂಡವರ ಸೈನ್ಯವನ್ನು, ದೃಷ್ಟ್ವಾ- ನೋಡಿ, ತು - ಮತ್ತು, ಆಚಾರ್ಯಂ - ದ್ರೋಣಾಚಾರ್ಯರ, ಉಪಸಂಗಮ್ಯ, ಬಳಿಗೆ ಹೋಗಿ, ವಚನಂ- ಮಾತುಗಳು, ಅಬ್ರವೀತ್- ಹೇಳಿದನು.
ತಾತ್ಪರ್ಯ:
ಆಗ ರಾಜ ದುರ್ಯೋಧನನು ವ್ಯೂಹಾಕಾರವಾಗಿ ರಚಿಸಲ್ಪಟ್ಟ ಪಾಂಡವ ಸೈನ್ಯವನ್ನು ನೋಡಿ, ದ್ರೋಣಾಚಾರ್ಯನತ್ತ ಬಳಿಗೆ ಹೋಗಿ ಈ ಮಾತನ್ನು ಹೇಳಿದನ್ನು
ಪಾಂಡವಾನೀಕಮ್ ಪಾಂಡವ + ಆನೀಕಂ ಆನೀಕ ಎನ್ನುವುದೊಂದು ತುಕಡಿ ಎನ್ನಬಹುದು. ಪೂರ್ತಿ ಸೈನ್ಯವಲ್ಲ. ಪಾಂಡವರ ಸೈನ್ಯದ ಒಂದು ಆನೀಕವನ್ನು ಕಂಡಾಗ ದುರ್ಯೋಧನ ಭಯಗೊಂಡು, (ತನ್ನ ಬಳಿ ಪಾಂಡವರಿಗಿಂತಲೂ ಹೆಚ್ಚಾದ ಸೈನ್ಯವಿದ್ದೂ ಸಹ ಆತ ಭಯಗೊಂಡದ್ದು ಆತನ ಮನಸ್ಸು ಕಳೆಗುಂದುತ್ತದೆ ಎನ್ನುವುದನ್ನು ಗಮನಿಸಿ) ದ್ರೋಣರ ಬಳಿಗೆ ಹೋಗುತ್ತಾನೆ.

Leave a Reply

Your email address will not be published. Required fields are marked *

Related Post

“ ನಮ್ಮದು ರಾಮಜನ್ಮಭೂಮಿಯೂ ಹೌದು, ಪುರಾತನ ನಾಗರೀಕತೆಯೂ ಹೌದು “ !“ ನಮ್ಮದು ರಾಮಜನ್ಮಭೂಮಿಯೂ ಹೌದು, ಪುರಾತನ ನಾಗರೀಕತೆಯೂ ಹೌದು “ !

  ವಾಚನ ವ್ಯಾಖ್ಯಾನ - ಹೆಚ್ ಕೆ ಪ್ರಭಾ ಲಿಪಿಕಾರರು - ವಿನುತಾ ಪಾಟೀಲ್ ********************* ಧೃತರಾಷ್ಟ್ರ ಉವಾಚ । ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ । ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥೧॥ ಪದ ವಿಭಾಗ ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ ಯುಯುತ್ಸವಃ ಮಾಮಕಾಃ ಪಾಂಡವಾಃ ಚ ಏವ

ಭವದ ಬೆಳಕಿನ ಭಗವದ್ಗೀತೆ – 4ಭವದ ಬೆಳಕಿನ ಭಗವದ್ಗೀತೆ – 4

  ವಾಚನ ವ್ಯಾಖ್ಯಾನ - ಹೆಚ್ ಕೆ ಪ್ರಭಾ ಲಿಪಿಕಾರರು - ವಿನುತಾ ಪಾಟೀಲ್ ********************* ಧೃತರಾಷ್ಟ್ರ ಉವಾಚ । ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ । ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥೧॥ ಪದ ವಿಭಾಗ ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ ಯುಯುತ್ಸವಃ ಮಾಮಕಾಃ ಪಾಂಡವಾಃ ಚ ಏವ

ಭವದ ಬೆಳಕಿನ ಭಗವದ್ಗೀತೆ -5ಭವದ ಬೆಳಕಿನ ಭಗವದ್ಗೀತೆ -5

https://secureservercdn.net/166.62.112.219/139.4a7.myftpupload.com/wp-content/uploads/2020/06/adhyaya-1-91011.mp3?time=1594148345   ವಾಚನ ವ್ಯಾಖ್ಯಾನ - ಹೆಚ್ ಕೆ ಪ್ರಭಾ ಲಿಪಿಕಾರರು - ವಿನುತಾ ಪಾಟೀಲ್ ********************* ಧೃತರಾಷ್ಟ್ರ ಉವಾಚ । ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ । ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥೧॥ ಪದ ವಿಭಾಗ ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ ಯುಯುತ್ಸವಃ ಮಾಮಕಾಃ ಪಾಂಡವಾಃ ಚ