ಬಾರ್ಡೋಲಿ ಹೋರಾಟ – ೧


ಬಾರ್ಡೋಲಿ ಗುಜರಾತಿನ ಸಣ್ಣ ತಾಲೂಕು ಸ್ಥಳ. ಸ್ವತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಮತ್ತು ಕರನಿರಾಕಣೆಯಿಂದ ತನ್ನ ಛಾಪನ್ನು ಸ್ವತಂತ್ರ್ಯ ಹೋರಾಟದ ಪುಟಗಳಲ್ಲಿ ಮೂಡಿಸಿದ ಸ್ಥಳ. ೧೯೨೨ ರಲ್ಲಿ ಗಾಂಧೀಜಿ ತಮ್ಮ ಅಸಹಕಾರ ಚಳುವಳಿಯ ಭಾಗವಾಗಿ ಕರನಿರಾಕರಣೆ ಆಂದೋಲನಕ್ಕೆ ಬಾರ್ಡೋಲಿಯನ್ನು ಆರಿಸಿಕೊಳ್ಳುತ್ತಾರೆ ಆದರೆ ಗಾಂಧೀಜಿ ಸ್ವತಃ ಈ ಆಂದೋಲನವನ್ನು ನಿಲ್ಲಿಸುವಂತೆ ಆದೇಶಿಸುತ್ತಾರೆ. ಅವರೇ ಆರಂಭಿಸಿದ ಅಸಹಕಾರ ಚಳುವಳಿ ದೇಶದ ಸಮಸ್ಥ ಜನರನ್ನು ಒಗ್ಗೂಡಿಸುತ್ತಿರುವಾಗ ಇಂತಹ ನಿರ್ಧಾರಕ್ಕೆ ಬಂದುಬಿಡುವುದು ಹೇಡಿತನವೆಂದು ನೆಹರೂ ಆದಿಯಾಗಿ ಎಲ್ಲರೂ ಖಂಡಿಸುತ್ತಾರೆ. ಅಸಹಕಾರವನ್ನು ಹಿಂಪಡೆಯಲು ಕಾರಣವಾದದ್ದು ಚೌರಿಚೌರಾದ ದುರ್ಘಟನೆ. ೨ ಫೆಬ್ರವರಿ ೧೯೨೨ ರಂದು ಭಗವಾನ್ ಆಹಿರ್ ಎನ್ನುವವರ ನೇತೃತ್ವದಲ್ಲಿ ಗಾಂಧೀಜಿಯ ಸಲಹೆಯ ಮೇರೆಗೆ ಅತಿಯಾದ ಬೆಲೆಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾಗ ಪೋಲೀಸರು ನಾಯಕರನ್ನು ಬಂಧಿಸುತ್ತಾರೆ . ಈ ಬಂಧನವನ್ನು ವಿರೋಧಿಸಿ ೪ ಫೆಬ್ರವರಿಯಂದು ಚೌರಿ ಚೌರಾದ ಮಾರುಕಟ್ಟೆ ಸ್ಥಳದಲ್ಲಿ ಪ್ರತಿಭಟನೆ ನಡೆಯುತ್ತಿರುತ್ತದೆ ಸುಮಾರು ೨೩೦೦ ಜನರಿದ್ದ ಆ ಪ್ರತಿಭಟನೆ ಮಾರುಕಟ್ಟೆಯ ಮದ್ಯದಂಗಡಿಯನ್ನು ನಿರ್ಬಂಧಿಸುತ್ತದೆ. ಹೋರಾಟದ ಮುಂಚೂಣಿ ನಾಯಕರನ್ನು ಬಂಧಿಸಲಾಗುತ್ತದೆ. ಅವರನ್ನು ಬಿಡುಗಡೆಗೊಳಿಸುವಂತೆ ಪ್ರತಿಭಟನಕಾರರು ಪೋಲೀಸ್ ಸ್ಟೇಷನ್ ಮುತ್ತಿಗೆ ಹಾಕುತ್ತಾರೆ. ಪೋಲೀಸರು ಗಾಳಿಯಲ್ಲಿ ಗುಂಡನ್ನು ಹಾರಿಸುತ್ತಾರೆ. ಇದರಿಂದ ರೊಚ್ಚಿಗೆದ್ದ ಜನ ಕಲ್ಲುತೂರಾಟ ನಡೆಸುತ್ತಾರೆ. ಈ ಗಲಭೆಯಲ್ಲಿ ನಾಲ್ಕು ಜನ ಸತ್ತು ಹಲವಾರು ಜನರು ಗಾಯಗೊಳ್ಳುತ್ತಾರೆ. ಗಲಭೆಯಲ್ಲಿ ಪೋಲೀಸರು ಪೋಲೀಸ್ ಚೌಕಿಯೆಡೆಗೆ ನುಗ್ಗಿದಾಗ ಹೋರಾಟಗಾರದು, ಗುಮಾಸ್ತರು ಮತ್ತು ಪೋಲೀಸರು ಆ ಚೌಕಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಗಲಭೆಯಲ್ಲಿ ಸುಮಾರು ೨೨ ರಿಂದ ೨೩ ಜನರು ಸತ್ತರು ಎನ್ನುವ ವರದಿಗಳಿವೆ. ಇದನ್ನು ತಿಳಿದಾಗ ಗಾಂಧೀಜಿ ಅಸಹಕಾರ ಚಳುವಳಿಯನ್ನು ನಿಲ್ಲಿಸುವ ನಿರ್ಧಾರ ಮಾಡುತ್ತಾರೆ. ಇದು ನೆಹರೂ ಆದಿಯಾಗಿ ಎಲ್ಲರಿಗೂ ಬೇಸರವನ್ನುಂಟು ಮಾಡುತ್ತದೆ. ಕಾರಣ ಅಸಹಕಾರ ಚಳುವಳಿಯಿಂದ ಜನರು ಒಗ್ಗೂಡುತ್ತಿದ್ದರು ಈಗ ಈ ನಿರ್ಧಾರದಿಂದ ಹಿಂದೆ ಸರಿದರೆ ಜನರ ಶಕ್ತಿಯನ್ನು ಕುಂಟಿತಗೊಳಿಸಿದಂತಾಗುತ್ತದೆ ಎನ್ನುವುದಾಗಿತ್ತು. ಇದಾದ ನಂತರ ಗಾಂಧೀಜಿಯನ್ನು ಬಂಧಿಸಲಾಗುತ್ತದೆ. ಈ ಕಾಲದಲ್ಲೇ ಬಾರ್ಡೋಲಿ ಘಟನೆ ನಡೆಯುವಂತಹುದು.


೧೯೨೫ರಲ್ಲಿ ಭೂಕಂದಾಯವನ್ನು ಯಾವುದೇ ನ್ಯಾಯ ಮತ್ತು ಸಮರ್ಥನೀಯ ಮಾರ್ಗವನ್ನನುಸರಿಸದೆ ಹೆಚ್ಚು ಮಾಡಲಾಗುತ್ತದೆ. ಇದರ ವಿರುದ್ಧ ಪ್ರತಿಭಟನೆಗಳಾಗುತ್ತದೆ ಮತ್ತು ಬಾಂಬೆಯ ಲೆಜಿಸ್ಲೇಟಿವ್ ಕೌನ್ಸಿಲ್ ಗಳಲ್ಲಿ ರೈತರ ಹೋರಾಟವನ್ನು ಬೆಂಬಲಿಸಲಾಗುತ್ತದೆ. ಸೆಪ್ಟೆಂಬರ್ ೧೯೨೭ರಲ್ಲಿ ಮುನ್ಷಿಯವರು ಭೂಕಂದಾಯದ ವಿಶ್ಲೇಷಣಾತ್ಮಕ ವರದಿಯನ್ನು ಪರಿಷತ್ತಿನ ಮುಂದೆ ಹೀಗೆ ಮಂಡಿಸುತ್ತಾರೆ.
’ನೊಂದಾಯಿತ ಸದಸ್ಯರು ಶಾಸಕಾಂಗ ಪರಿಷತ್ತಿನ ಮುಂದಿಡುವ ವಿಷಯವೇನೆಂದರೆ ಚೊರಾಸಿ ಮತ್ತು ಬಾರ್ಡೋಲಿಯಲ್ಲಿ ನಿಗದಿ ಪಡಿಸಿರುವ ಭೂಕಂದಾಯವನ್ನು ಪುನಃ ಪರಿಶೀಲಿಸಬೇಕು ಮತ್ತು ಈಗ ವಿಧಿಸಿರುವ ಭೂಕಂದಾಯವನ್ನು ಯಾವುದೇ ಕಾರಣಕ್ಕೆ ಕಾರ್ಯರೂಪಕ್ಕೆ ತರಬಾರದು’. ಆದರೆ ಈ ವರದಿಯನ್ನು ಮತ್ತು ಸಲಹೆಯನ್ನು ಶಾಸಕಾಂಗ ಪರಿಷತ್ತು ತಳ್ಳಿ ಹಾಕುತ್ತದೆ. ಬಾರ್ಡೋಲಿಯ ರೈತರಿಗೆ/ಜನರಿಗೆ ಯಾವುದೇ ಪರಿಹಾರವನ್ನೂ ಮತ್ತು ಸಹಾಯವನ್ನು ಮಾಡಲಾಗುವುದಿಲ್ಲವೆಂಬ ಸಂದೇಶವನ್ನು ಶಾಸಕಾಂಗ ಪರಿಷತ್ತು ಮಾಡಿಬಿಡುತ್ತದೆ. ಈ ಎಲ್ಲಾ ವಿವರಗಳು ಗಾಂಧೀಜಿಗೆ ಗೊತ್ತಿದ್ದರೂ ಅವರು ಕೈಕಟ್ಟಿ ಜೈಲಿನಲ್ಲಿ ಕೂರುತ್ತಾರೆಯೇ ವಿನಃ ರೈತರ ಮತ್ತು ಜನರ ಸಹಾಯಕ್ಕೆ ಬರುವುದಿಲ್ಲವೆನ್ನುವುದು ಗಮನಿಸಬೇಕಾದ ವಿಷಯ. ಆದರೆ ಬಾರ್ಡೋಲಿ ಸ್ವತಃ ಹೋರಾಟಕ್ಕಿಳಿಯುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುತ್ತದೆ. ಪ್ರತಿಭಟನೆಗೂ ಬೆಲೆಕೊಡದ ಮತ್ತು ಶಾಂತಿಪೂರ್ವಕ ಮಾತುಕತೆಗೂ ಬೆಲೆಕೊಡದ ಶಾಸಕಾಂಗ ಪರಿಷತ್ತಿನ ವಿರುದ್ಧ ಸತ್ಯಾಗ್ರಹಕ್ಕೆ ಬಾರ್ಡೋಲಿ ಸಿದ್ಧವಾಗುತ್ತಿರುತ್ತದೆ. ಸ್ವರಾಜ್ಯದ ಮುಂಚೂಣಿಯಲ್ಲಿ ನಿಲ್ಲುವ ನಿರ್ಧಾರವನ್ನು ಬಾರ್ಡೋಲಿ ಮಾಡಿಯಾಗಿರುತ್ತದೆ. ಎಸ್ ಸತ್ಯಮೂರ್ತಿ (ಮದ್ರಾಸ್ ಸಂಸ್ಥಾನದ ಸ್ವರಾಜ್ಯ ಪಾರ್ಟಿಯ ಸಂಸ್ಥಾಪಕರು ಮತ್ತು ನಾಯಕರು) ಹೇಳುವಂತೆ ’ಸ್ವರಾಜ್ಯಕ್ಕಾಗಿ ಮುಂಚೂಣಿಯಲ್ಲಿರು’ ಎನ್ನುವ ಮಾತನ್ನು ಅಕ್ಷರಷಃ ಬಾರ್ಡೋಲಿ ತೆಗೆದುಕೊಂಡಿರುತ್ತದೆ. ಗಾಂಧೀಜಿ ಇಲ್ಲದ ಕಾರಣ ಈ ಸತ್ಯಾಗ್ರಹವನ್ನು ಮುನ್ನಡೆಸುವ ಜವಾಬ್ದಾರಿ ಸರ್ದಾರ್ ವಲ್ಲಭಬಾಯಿ ಪಟೇಲರ ಹೆಗಲಿಗೇರುತ್ತದೆ. ವಲ್ಲಭಬಾಯಿ ಪಟೇಲ್ ಕೈಗೆ ಬಂದ ಹೋರಾಟ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತದೆ. ಅಸಹಕಾರ ಚಳುವಳಿಯ ಮತ್ತೊಂದು ರೂಪವೆನ್ನುವಂತೆ ಕರನಿರಾಕರಣೆಯನ್ನು ವಲ್ಲಭಬಾಯಿ ಪಟೇಲ್ ಆರಂಭಿಸುತ್ತಾರೆ. ಭೂಕಂದಾಯದ ಹೆಚ್ಚಳದ ಮೇಲಿನ ಆಕ್ರೋಶ ಕರನಿರಾಕರಣೆಯ ಸ್ಥಿತಿಗೆ ಬಂದು ತಲುಪುತ್ತದೆ. ಮುನ್ಷಿ ಮುಂತಾದವರು ಈ ಗಾಂಧಿ ಮಾರ್ಗದ ಬಗ್ಗೆ ಹೆಚ್ಚು ಒಲವನ್ನೇನೂ ಇಟ್ಟುಕೊಂಡಿರಲಿಲ್ಲ ಈ ಕಾರಣಕ್ಕಾಗಿಯೇ ಅವರುಗಳು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಿಲ್ಲ.

ಮುಂದೆ….

Leave a Reply

Your email address will not be published. Required fields are marked *

Related Post

“ ತಾಜ್ ಮಹಲ್ ನ ಪೊಳ್ಳು ಇತಿಹಾಸದ ಅನಾವರಣ -ನಿಜ ಇತಿಹಾಸದತ್ತ ಒ೦ದು ನೋಟ “ ಬಿ.ಬಿ.ಸಿ. ವರದಿ“ ತಾಜ್ ಮಹಲ್ ನ ಪೊಳ್ಳು ಇತಿಹಾಸದ ಅನಾವರಣ -ನಿಜ ಇತಿಹಾಸದತ್ತ ಒ೦ದು ನೋಟ “ ಬಿ.ಬಿ.ಸಿ. ವರದಿ

    ಪ್ರೊಫೆಸರ್ ಪಿ.ಎನ್.ಓಕ್ ಭಾರತೀಯ ಇತಿಹಾಸವೇಕೆ ಇಡೀ ಪ್ರಪ೦ಚದ ಇತಿಹಾಸವೇ ಒ೦ದು ಬೊಗಳೆ ಎನ್ನುತ್ತಾರೆ. ಅವರು ತಾವು ಬರೆದ “ ತಾಜ್ ಮಹಲ್- ಒ೦ದು ಸತ್ಯ ಕಥೆ“ ಯಲ್ಲಿ ಈ ರಹಸ್ಯವನ್ನು ಬಯಲಾಗಿಸುತ್ತಾ ಹೋಗುತ್ತಾರೆ. ಅವರು ಹೇಳುವ೦ತೆ ತಾಜ್ ಮಹಲ್ ರಾಣಿ ಮುಮ್ತಾಜಳ ಗೋರಿಯಾಗಿರದೆ ಅದೊ೦ದು ಹಿ೦ದೂಗಳ

೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!

ಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ  ಕಾಲದ ಕನ್ನಡಿಗೆ  ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋವಾದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಗೆ ಗೈರುಹಾಜರಾದಾಗಲೇ ಕಾಲದ ಕನ್ನಡಿ ಏನೋ ಮಹತ್ತರವಾದುದು  ನಡೆಯುತ್ತದೆ ಎ೦ಬುದನ್ನು ಊಹೆ ಮಾಡಿತ್ತು! ಆದರೆ

ಅವರಿಲ್ಲದ ಭಾರತದ ರಾಜಕೀಯ ರ೦ಗ ಅಸಹನೀಯವೆನಿಸತೊಡಗಿದೆ…!!!ಅವರಿಲ್ಲದ ಭಾರತದ ರಾಜಕೀಯ ರ೦ಗ ಅಸಹನೀಯವೆನಿಸತೊಡಗಿದೆ…!!!

``ಹೌದು, ನನ್ನ ರಾಜಕೀಯ ಜೀವನದಲ್ಲಿ ಇ೦ಥ ಘಟನೆಗೆ ನಾನೆ೦ದೂ ಸಾಕ್ಷಿಯಾಗಬಾರದಿತ್ತು!“ ಎ೦ದು ಆತ ಪತ್ರಕರ್ತರೆದು ರು ತನ್ನ೦ತರ೦ಗವನ್ನು ತೋಡಿಕೊಳ್ಳುತ್ತಿದ್ದಾಗ ಆ ವಾತಾವರಣವೇ ಮೌನವಾಗಿ ಅವರ ನೋವಿನ ಜೊತೆ ಗೂಡಿತ್ತು!! “ಅವರೊಬ್ಬ ದೇಶದ್ರೋಹಿ!!“ ಎ೦ದ ಸೋನಿಯಾರ ಮಾತಿಗೆ, ತಾನೊಬ್ಬನೇ ಮೌನವಾಗಿ ಬಿಕ್ಕಳಿಸುತ್ತಿದ್ದುದ್ದನ್ನು ಕ೦ಡು , ಕೇಳಿ ನಾನೂ ಏಕಾ೦ತದಲ್ಲಿ ಒಬ್ಬನೇ