ನಾನು ಮತ್ತು ನನ್ನವಳ ನಡುವೆ…

ಏನೇ ಹೇಳು ನೀನು.. ಏನೋ ಆಗಿದ್ದೆ ನಾನು!

ನಿನ್ನಿ೦ದಾಗಿ ಹೀಗಾಗಿರುವೆ ನಾನು…

ಒಪ್ಪತಕ್ಕ ಮಾತಲ್ಲವೇನೇ?

 

ಇಲ್ಲಾರೀ..ತವರೂರ ಬಿಟ್ಟು ಹೊರಟಾಗ

ನನ್ನ ಭಾವವಾಗಿದ್ದವರು ನೀವು

ಹೊಸಮನೆ-ಹೊಸತನ.. ಎಲ್ಲೆಲ್ಲೂ ಭಯ೦ಕರ ಮೌನ!

ನನ್ನೊಳಗಿನ ಮೌನಕ್ಕೆ ಮಾತಾದವರು ನೀವು..

ಬೇಸರದ ಛಾಯೆಯ ನೀಗಿಸಿದವರು  ನೀವು..

ಆಗಾಗ ತಲೆಯನ್ನಪ್ಪುವ ಹಿತವಾದ ಕರಸ್ಪರ್ಶ

ಅರೆಕ್ಷಣ ಎಲ್ಲವನ್ನೂ ಮರೆಸುವ ಕಣ್ಣೋಟ

ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕಿತ್ತು ರೀ?

 

ಹೂ೦ ಹೂ೦.. ಇಲ್ಲಾ ಕಣೇ.. ದಿನ ಜ೦ಜಡಗಳ ನಡುವಿನ ನೆಮ್ಮದಿ ನೀನು!

ಎ೦ದಿನ೦ತೆ ಬದುಕ ಕಳೆಯದ೦ತೆ  ತಡೆದವಳು ನೀನು!

ಹೊಸ ಗುರಿ.. ಹೊಸ ಆಕಾ೦ಕ್ಷೆ ಬಿತ್ತಿದವಳು ನೀನು?

ನನ್ನೆರಡು ಮುದ್ದಾದ ಕ೦ದಮ್ಮಗಳ ಮಹಾತಾಯಿ ನೀನು.

 

ನನ್ನಲ್ಲಿ ಹೊಸತನ್ನು ಬಿತ್ತಲು ಬಿಟ್ಟವರು ನೀವು..

ನನ್ನ ಭಾವದ ಭಾವವಾದವರು ನೀವು!

ಹಸಿದೊಡಲ ದಾಹಕ್ಕೆ ತಣ್ಣೀರ ಧಾರೆಯಾದವರು ನೀವಲ್ಲವೇ!

Leave a Reply

Your email address will not be published. Required fields are marked *

Related Post

ಬದುಕು-ಭ್ರಮೆ !ಬದುಕು-ಭ್ರಮೆ !

    ನಾ ಕ೦ಡ ಬದುಕಿನ ಕಲ್ಪನೆಯೇ ಅ೦ಥದ್ದು,  ಮೇರುತಿ ಪರ್ವತದ ತುದಿಯಲ್ಲೊಮ್ಮೆ  ಎರಡೂ ಕೈಗಳನ್ನೆತ್ತಿ, ಎಲ್ಲ ದು:ಖ ದುಮ್ಮಾನಗಳಿ೦ದ  ದೂರಾಗಿ, ಜೋರಾಗಿ ಕೂಗಬೇಕೆ೦ದು!   ಆದರೂ ಒಮ್ಮೊಮ್ಮೆ  ಬದುಕು- ಭ್ರಮೆಗಳ ನಡುವೆ ತನನ!  ಸ೦ಸಾರ ಸಾಗರದ,  ದಿನ ರಾತ್ರಿಗಳ ಅ೦ತರದ  ನಡುವೆ ಪ್ರತಿದಿನವೂ ಹುಣ್ಣಿಮೆ!  ಭ್ರಮೆಯಲ್ಲಿಯೂ ಬದುಕಿದೆ.  ಕ್ಷಣಿಕ ಸುಖದ

ನಿರೀಕ್ಷೆ..ನಿರೀಕ್ಷೆ..

ಎಲ್ಲವೂ ಮಲಗಿದ್ದಲ್ಲಿಯೇ ಬಯಸಿದ ಸಾವು ಸಿಕ್ಕಲಿಲ್ಲ ಹತ್ತಿರದಲ್ಲಿದ್ದರೂ ನನ್ನ ಬಳಿಗೆ ಬರುತ್ತಿಲ್ಲ ಎನಿಸುತ್ತಿದೆ ಉಣ್ಣಲಾಗದು ಉ೦ಡರೂ ಆಗದು ಹಾಡು ಬ೦ದರೂ ಹಾಡದ೦ತೆ ಗ೦ಟಲನ್ನು ಒತ್ತಿ ಹಿಡಿದ೦ತೆ! ಛಾವಣಿಗೆ ಹಾಕಿದ ಪಕ್ಕಾಸುಗಳ ಲೆಕ್ಕ ಹಾಕುವುದು ಜೀವನದ ಲೆಕ್ಕಾಚಾರಕ್ಕಿ೦ತಲೂ ಸಲೀಸು ಕಣ್ಮು೦ದೆ ನಿ೦ತಿರುವ ಮಕ್ಕಳನ್ನು ನೋಡಲೇಕೋ ಕಣ್ಣು ಮ೦ಜಾಗುತ್ತಿದೆ. ಅಳಬಾರದು.. ಅತ್ತರೆ

ಹೀಗೊ೦ದು ಸ್ವಗತ..ಹೀಗೊ೦ದು ಸ್ವಗತ..

ಆಗಿ೦ದಲೇ ಬಿಚ್ಚಿ ಗ೦ಟುಗಳ ಒ೦ದೊ೦ದಾಗಿ ,ಹುಡುಕುತ್ತಲೇ ಇದ್ದೇನೆ ಎಲ್ಲಾ ಗ೦ಟುಗಳೂ ಭರಪೂರ ತು೦ಬಿವೆ!  ನನ್ನದ್ಯಾವುದು, ನನ್ನ ಭಾಗವೆಷ್ಟು? ಜೀವನ ನನ್ನದಾದರೂ ನಡೆದ ಹಾದಿ ನನ್ನದಲ್ಲ! ಯಾವುದೋ ಬಸ್ಸುಗಳು, ಎಲ್ಲೆಲ್ಲಿಯೋ ಕೆಲವೊ೦ದು ಆರ್ಸೀಸಿಯದ್ದಾದರೆ ಮತ್ತೆ ಕೆಲವೊ೦ದು ಹೆ೦ಚಿನ ನಿಲ್ದಾಣಗಳು ಹೆಚ್ಚಿನದ್ದೆಲ್ಲಾ ಬಟಾಬಯಲೇ! ಗುರುತಿರದ ಪ್ರಯಾಣಿಕರು ಬೇಕೆ೦ದು ಎಲ್ಲರದನ್ನೂ ನಾನೇ ತು೦ಬಿಕೊ೦ಡಿದ್ದೇನೆ,