ಧರ್ಮಗಳು ಪವಿತ್ರವಲ್ಲ.

ಧರ್ಮಗಳು ಪವಿತ್ರವಲ್ಲ.
ಧರ್ಮಗಳ ಒಳತಿರುಳು ಪವಿತ್ರ.
(ಇದು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ)

ಧರ್ಮದ ಅಂಧಾಭಿಮಾನದಿಂದ ಹೊರಬರದ ಹೊರತು ದೇಶದ ಅಥವಾ ಜಗತ್ತಿನ ಯಾವ ಸಮುದಾಯವು ಮನುಜ ಪ್ರೀತಿಯನ್ನು ಕಾಣಲು ಸಾಧ್ಯವಿಲ್ಲ.
ಹುಟ್ಟುವಾಗ ಬೆತ್ತಲೆ!
ಹೋಗುವಾಗ ಬೆತ್ತಲೆ!
ಈ ನಡುವೆ ಒಳಿತನ್ನು ಬಯಸುತ್ತ ಆನಂದದಿಂದ ಎಲ್ಲೋ ಇರುವ ಸ್ವರ್ಗವನ್ನು ಕಾಣದೆ ಇಲ್ಲೇ ಇರುವ ನಿಸರ್ಗವನ್ನು ಕಾಣಿ.

ಈ ಕ್ಷಣದಲ್ಲಿ ಸೋತು ಬಿಡಿ,
ನಿರ್ಲಕ್ಷಿಸಿ ಬಿಡಿ, ಮೌನವಹಿಸಿ…..

ಆಸಕ್ತರು ಅವರು ಇಚ್ಚಿಸಿದಂತೆ 9 9 9 ದೀಪಗಳನ್ನು ಹಚ್ಚಿ ಮಾನಸಿಕ ನೆಮ್ಮದಿ ಪಡೆಯಲಿ.

ಪ್ರೋತ್ಸಾಹಿಸದಿದ್ದರೂ ಈಗ ವಿರೋಧಿಸುವುದು ಬೇಡ.

ಈ ಸಂಕಷ್ಟದ ಸಮಯದಲ್ಲಿ ಯಾರಾದರೂ ಒಂದು ಹೆಜ್ಜೆ ಹಿಂದೆ ಇಡಲೇ ಬೇಕಿದೆ. ದೇಶದ ಒಟ್ಟು ಹಿತಾಸಕ್ತಿಯಿಂದ ಇದನ್ನು ಮಾಡೋಣ.

ದೀಪ ಹಚ್ಚುವುದು ಮೌಡ್ಯವೋ, ನಂಬಿಕೆಯೋ, ಸ್ಪೂರ್ತಿಯೋ, ಭಕ್ತಿಯೋ, ಸಾಂಕೇತಿಕವೋ, ಆಚರಣೆಯೋ, ಸಂಪ್ರದಾಯವೋ, ಭಯವೋ, ಆಸೆಯೋ ಏನೇ ಆಗಿರಲಿ ಅದನ್ನು ಸ್ವಲ್ಪ ದಿನಗಳ ನಂತರ ಚರ್ಚಿಸೋಣ.

ನಂಬಿಕೆಯಿಂದ ಬೆಳೆಯುವ ಜ್ಞಾನಕ್ಕಿಂತ ವಾಸ್ತವಿಕ ನೆಲೆಯಲ್ಲಿ ಬೆಳೆಯುವ ಜ್ಞಾನ ಹೆಚ್ಚು ದೃಢವಾಗಿರುತ್ತದೆ ಮತ್ತು ದೀರ್ಘಕಾಲದ್ದೂ ಹಾಗೂ ಸಾರ್ವತ್ರಿಕವಾಗಿರುತ್ತದೆ. ನಂಬಿಕೆ ಆಯಾ ವ್ಯಕ್ತಿ ಮತ್ತು ಧರ್ಮ ಪರಿಸರವನ್ನು ಅವಲಂಬಿಸಿರುತ್ತದೆ, ವೈಯಕ್ತಿಕವಾಗಿರುತ್ತದೆ ಮತ್ತು ತಾತ್ಕಾಲಿಕವಾಗಿರುತ್ತದೆ.

ಭಾವನಾತ್ಮಕ ಸನ್ನಿವೇಶಗಳಲ್ಲಿ ನಂಬಿಕೆ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಸಮಚಿತ್ತದ ಸಂದರ್ಭದಲ್ಲಿ ವೈಚಾರಿಕತೆ ಮಹತ್ವ ಪಡೆಯುತ್ತದೆ.

ದೀಪ ಹಚ್ಚುವುದು ಭಾರತ ಸರ್ಕಾರದ ಆಜ್ಞೆಯಲ್ಲ. ಪ್ರಧಾನ ಮಂತ್ರಿ ಸ್ಥಾನದಲ್ಲಿರುವ ನರೇಂದ್ರ ಮೋದಿ ಎಂಬ ವ್ಯಕ್ತಿಯ ವೈಯಕ್ತಿಕ ಮನವಿ. ಭಯದ ವಾತಾವರಣ ಇರುವಾಗ ಜನರಲ್ಲಿ ಆತ್ಮವಿಶ್ವಾಸ ತುಂಬುವ ಅವರ ಒಂದು ನಂಬಿಕೆಯ ಮಾರ್ಗವೂ ಇರಬಹುದು.

ಅದು ಸರಿಯೋ ತಪ್ಪೋ ಎಂಬುದು ಸಹ ಚರ್ಚೆಯ ವಿಷಯ. ಆದರೆ ಅದನ್ನು ಸ್ವಲ್ಪ ಕಾಲ ಮುಂದೂಡೋಣ. ಅನವಶ್ಯಕ ಘರ್ಷಣೆ ತಪ್ಪಿಸೋಣ.

ಈ ಸಮಯ ಯಶಸ್ವಿಯಾಗಿ ದಾಟಿದ ನಂತರ ಅದರ ಬಗ್ಗೆ ನಮ್ಮ ನಿಲುವುಗಳನ್ನು ನೇರವಾಗಿ ಹೇಳೋಣ.

ಬಹುತೇಕ ಮಾಧ್ಯಮಗಳು ಸಹ ಜನಪ್ರಿಯತೆಯ ಹಿಂದೆ ಬಿದ್ದು ಧಾರ್ಮಿಕ ಮುಖಂಡರಿಂದ ದೀಪದ ವಿವಿಧ ಮಹತ್ವಗಳನ್ನು ಪ್ರಚಾರ ಮಾಡುತ್ತಿವೆ ಮತ್ತು ಬೆಂಬಲಿಸುತ್ತಿವೆ.

ಮೋದಿಯವರಿಗೆ ಭಾರತೀಯರ ಭಾವನಾತ್ಮಕ ಮನಸ್ಥಿತಿ ಅರ್ಥವಾಗಿದೆ. ಅಲ್ಲದೆ ಇದರಿಂದ ನೇರವಾಗಿ ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ಇರುವುದರಿಂದ ಅವರವರ ಭಾವಕ್ಕೆ ಬಿಟ್ಟು ಬಿಡೋಣ.

ಸಂಪ್ರದಾಯವಾದಿಗಳು ಬೆಳಕಿನ ದೀಪ ಹಚ್ಚಲಿ. ಎಣ್ಣೆ, ಹತ್ತಿ, ಮೇಣ, ಮೊಬೈಲ್ ಕಿರಣಗಳು ಅವರಿಗೆ ಮಾನಸಿಕ ನೆಮ್ಮದಿ ನೀಡಲಿ.

ವಿಚಾರವಾದಿಗಳು ಜ್ಞಾನದ ದೀಪ ಹಚ್ಚಲಿ. ಬುದ್ದ ಬಸವ ಗಾಂಧಿ ಅಂಬೇಡ್ಕರ್ ಅವರ ಚಿಂತನೆಗಳು ಇವರಿಗೆ ಮಾನಸಿಕ ನೆಮ್ಮದಿ ನೀಡಲಿ. ಅದನ್ನು ಅವರು ಮಾಡಲಿ.

ದೀಪದ ಬೆಳಕು ಕಣ್ಣು ಮನಸ್ಸಿಗೆ ತಾತ್ಕಾಲಿಕ ಖುಷಿ ನೀಡಿದರೆ,
ಜ್ಞಾನದ ಬೆಳಕು ಶಾಶ್ವತವಾಗಿ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂಬ ಅಭಿಪ್ರಾಯದೊಂದಿಗೆ…….

ಈಗ ನಮ್ಮೆಲ್ಲರ ಆಧ್ಯತೆ ಕೊರೋನಾ ಮತ್ತು ಹಸಿವಿನ ವಿರುದ್ಧ ಹಾಗೂ ರೈತರ ಪರ ಹೋರಾಟ ಮಾತ್ರವಾಗಿರಲಿ. ಈಗಲಾದರೂ ಸರ್ಕಾರದ ಯೋಜನೆಗಳು ಭ್ರಷ್ಟಾಚಾರ ಮುಕ್ತವಾಗಿ ಅವಶ್ಯಕತೆ ಇರುವ ಜನರಿಗೆ ತಲುಪುವಂತೆ ನೋಡಿಕೊಳ್ಳೋಣ.

ಜಾಗೃತಿ ಎಂದರೆ ಕೇವಲ ಆಕ್ರೋಶವಲ್ಲ,ಪ್ರತಿಭಟನೆಯಲ್ಲ,ಇನ್ನೊಬ್ಬರ ವಿರುದ್ಧದ ಹೋರಾಟ ಮಾತ್ರವಲ್ಲ,ಅದೊಂದು ಅರಿವು,ಅದೊಂದು ತಿಳುವಳಿಕೆ,ಅದೊಂದು ನಡವಳಿಕೆ..ನಿಜ..ಮನುಷ್ಯನ ಪ್ರಸಿದ್ಧಿಗಿಂತ ಪ್ರತಿಭೆ ಮುಖ್ಯ.

ತಮ್ಮ ಹಿತಕ್ಕಿಂತ ದೇಶದ ,ಸಮಾಜದ ಹಿತ ಮುಖ್ಯ.ಅದಕ್ಕಾಗಿ ಒಂದಾಗಿ ಕಾರ್ಯವೆಸಗ ಬೇಕೇ ಹೊರತು ಇನ್ನೊಂದು ಪಕ್ಷದ ಹುಳುಕನ್ನು ತೋರಿಸಿ ಆಡಿಕೊಳ್ಳುತ್ತಾ ತಮ್ಮ ನಾಯಕನನ್ನು ಸಮರ್ಥಿಸಿಕೊಳ್ಳುವ ಭಜನಾ ಮಂಡಳಿಯಾಗಬಾರದು.

ಎಲ್ಲರ ,ಎಲ್ಲವುದರ ಉದ್ದೇಶ,ಗುರಿ ದೇಶದ ಜನತೆಯ ಸುಖ,ಶಾಂತಿ ನೆಮ್ಮದಿ ಜೀವನಕ್ಕೆ ಪ್ರೇರಕವಾಗಿರಬೇಕು.ಅತ್ಯುತ್ತಮ ವಿಚಾರಧಾರೆ ಅಂತಹ ಸಮಾಜದ ,ನಾಯಕರ ,ಹಿಂಬಾಲಕರ ನಿರ್ಮಾಣವಾಗಲೇ ಬೇಕು.ಆಗ ಮಾತ್ರ ಉನ್ನತಿ ಸಾಧ್ಯ.ನಮ್ಮ ದೇಶ….

ಅಸತೋಮ ಸದ್ಗಮಯ,
ತಮಸೋಮ ಜ್ಯೋತಿರ್ಗಮಯ,
ಮೃತ್ಯೋರ್ಮ ಅಮೃತಂಗಮಯ….
ದ ಕಡೆ ಸಾಗಲಿ ಎಂದು ಆಶಿಸುತ್ತಾ………………………………

Leave a Reply

Your email address will not be published. Required fields are marked *

Related Post

ಹುಚ್ಚರ ಸಂತೆಯಲ್ಲಿ ನಿನ್ನನ್ನು ನಿಲ್ಲಿಸಿ ಎಲ್ಲರಿಗೂ ಹೇಳಬೇಕಿದೆಹುಚ್ಚರ ಸಂತೆಯಲ್ಲಿ ನಿನ್ನನ್ನು ನಿಲ್ಲಿಸಿ ಎಲ್ಲರಿಗೂ ಹೇಳಬೇಕಿದೆ

ಬುದ್ಧ ಪೌರ್ಣಮಿಯ ಬೆಳಕಿನಲ್ಲಿ ಮನುಷ್ಯನ ಮೆದುಳಿಗೆ ಕೈ ಹಾಕಿದ ಗೌತಮ ಬುದ್ಧನನ್ನೇ ಹುಡುಕುತ್ತಾ………… ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನಲೆಯ ಆತನ ವಿಚಾರಗಳು ವಿಶ್ವವ್ಯಾಪಿ ಮನ್ನಣೆ ಪಡೆದಿವೆ. ಆದರೆ,ಭಾರತದ ಸಂಸ್ಕೃತಿಯ ಹಿನ್ನೆಲೆಯಲ್ಲಿಖ್ಯಾತ ಮನಃಶಾಸ್ತ್ರಜ್ಞ ಯಾರಿರಬಹುದು ? ನನ್ನ ದೃಷ್ಟಿಯಲ್ಲಿ ಅದು ಸಿದ್ದಾರ್ಥನೆಂಬ

2004 ರಲ್ಲಿ ಆಗಿದ್ದು  2019 ರಲ್ಲಿ ಮತ್ತೊಮ್ಮೆ ಪುನರಾವರ್ತನೆ ಆಗದಿದ್ದರೆ ಸಾಕು..  ಭಾರತ ತಲೆ ಎತ್ತಿ ನಿಲ್ಲಬಹುದು..!!2004 ರಲ್ಲಿ ಆಗಿದ್ದು  2019 ರಲ್ಲಿ ಮತ್ತೊಮ್ಮೆ ಪುನರಾವರ್ತನೆ ಆಗದಿದ್ದರೆ ಸಾಕು..  ಭಾರತ ತಲೆ ಎತ್ತಿ ನಿಲ್ಲಬಹುದು..!!

ಕಾಲದಕನ್ನಡಿಗೆ ಇರೋ ಹೆದರಿಕೆ ಅಂದ್ರೆ ಇದೊಂದೇ.. 2004 ನೇ ಇಸವಿ ಕಣ್ಮುಂದೆ ಬರುತ್ತೆ… ಲೋಕಸಭೆಗೆ  ಅವಧಿಪೂರ್ವ ಚುನಾವಣೆ ಘೋಷಿಸಿದ  ಬಾಜಪಾ ಸರ್ಕಾರ. “ ಪ್ರಕಾಶಿಸುತ್ತಿದೆ ಭಾರತ”” ಎಂಬ ಭಾಜಪ ದವರ ಸ್ಲೋಗನ್.. ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಲಾಲ ಕೃಷ್ಣ ಅಡ್ವಾಣಿ ಹೆಸರು ಘೋಷಣೆ..  ಮತ ಕೇಳಲು ಬೆನ್ನ ಹಿಂದಿದ್ದ

“ಜನತೆ ಮತ್ತೊಮ್ಮೆ ಬೀದಿಗಿಳಿಯುವ ಮುನ್ನ……“!!!“ಜನತೆ ಮತ್ತೊಮ್ಮೆ ಬೀದಿಗಿಳಿಯುವ ಮುನ್ನ……“!!!

ಅಣ್ಣಾ ಹಜಾರೆಯವರ ನಿರಶನ ಅ೦ತ್ಯಗೊ೦ಡಿದೆ. ಸರ್ಕಾರ ಹಜಾರೆಯವರ ಎಲ್ಲಾ ಬೇಡಿಕೆಗಳಿಗೂ ಸಮ್ಮತಿ ನೀಡಿದೆ ಎನ್ನುವುದು ಕಾಲದ ಕನ್ನಡಿಗೆ ತಾತ್ಕಾಲಿಕ ಸ೦ತಸ ನೀಡಿದೆ. ಮು೦ದಿನ ಮು೦ಗಾರು ಅಧಿವೇಶನದಲ್ಲಿ ಲೋಕ ಪಾಲ ಮಸೂದೆಯನ್ನು ಜಾರಿಗೊಳಿಸುವ ಪ್ರಯತ್ನ ಮಾಡಲಾಗು ವುದೆ೦ಬ ಭರವಸೆ, ಸಮಿತಿಯ ಅಧ್ಯಕ್ಷರುಗಳು ಮತ್ತು ಸದಸ್ಯರುಗಳ ನಾಮಕರಣವನ್ನು ಮಾಡಿ, ಸಮಿತಿಯ ರಚನೆ