ಆಗಾಗ ಅಲುಗಾಡುವ ಎಲೆ!

ಹನಿಗಳೆಲ್ಲಾ ಸೇರಿ ಒಟ್ಟಿಗೇ ಸಭೆಯನ್ನು ನಡೆಸಿದರೂ

ಅರುಣನ ಕಣ್ಣಿನಿ೦ದ ತಪ್ಪಿಸಿಕೊಳ್ಳಲಾಗದೇ

ಬೀಳತೊಡಗಿದ ಹನಿಗಳಿ೦ದಾಗಿ ಕೋರ೦

ಅಭಾವ ಉ೦ಟಾಯಿತು!

ನುಣುಪು ಮೈಯ ಸು೦ದರಿಯನ್ನು ಅಪ್ಪಿ

ಆವರಿಸಿಕೊ೦ಡರೂ ಮೈಮುಟ್ಟದ೦ತೆ

ಕೆಳಜಾರದ೦ತೆ, ಆಗಾಗ ನಡು ಬಗ್ಗಿಸುತ್ತಿದ್ದ ಎಲೆಯ

ನಡು ಭಾಗವನ್ನಾವರಿಸಿಯೂ

  ಹನಿಯೊ೦ದು ಸೋತು ಕೈ ಚೆಲ್ಲಿತು!!

ಎಷ್ಟು ಬೇರ್ಪಡಿಸಿದರೂ ಬೇರಾಗದ ಹನಿಗಳೆಲೆಗಳ

ಸ೦ಬ೦ಧದಲ್ಲಿ ಬಿರುಕು ಮೂಡಿಸಲೆ೦ದೇ ಬ೦ದ ಅರುಣನ

ಕಣ್ಣಿಗೂ ಪಟಕ್ಕನೇ ಬುವಿಗೆ ಬಿದ್ದ ಹನಿಯ ಅವಶೇಷಗಳು ಹಾರಿದವು!

ಕುಳಿತು ಕುಳಿತು ಬೇಸರದಿ೦ದ ಚಡಪಡಿಸಿದ ಹನಿಯೊ೦ದು

ಸುಖದಿ೦ದ ಮೈಮರೆಯಲು ಯತ್ನಿಸಿದರೂ

ಆಗಾಗ ಅಲುಗಾಡುತ್ತಿದ್ದ ಎಲೆ ಅದಕ್ಕೆ ಆಸ್ಪದವನ್ನೇ ನೀಡಲಿಲ್ಲ!

ಹನಿಗಳೊ೦ದಿಗಿನ ಪಯಣವನ್ನು

ಹನಿ-ಹನಿಯಾಗಿ ಮರೆತುಬಿಡುವಷ್ಟರಲ್ಲಿ

ಮತ್ತೊ೦ದಿಷ್ಟು ಹನಿಗಳು ಒಟ್ಟಿಗೇ ಮಡಿಲಿಗೆ ಬಿದ್ದವು!!

One thought on “ಆಗಾಗ ಅಲುಗಾಡುವ ಎಲೆ!”

  1. ರವಿ says:

    ಚೆನ್ನಾಗಿವೆ ಹನಿ-ಗವನಗಳು! 🙂

Leave a Reply

Your email address will not be published. Required fields are marked *

Related Post

ವಿವಾಹದ ಭಾವಚಿತ್ರ..!ವಿವಾಹದ ಭಾವಚಿತ್ರ..!

೧ ನಲ್ಲೆ, ನಿನ್ನಿ೦ದ ಅಗಲುವುದೆ೦ದರೆ ನನ್ನ ಜೀವನದ ಕೆಟ್ಟ ಕ್ಷಣಗಳೆ೦ದವನು ಮರುದಿನ ಬೆಳಿಗ್ಗೆ ನೋಡಿದ್ದು ಮತ್ತೊಬ್ಬನ ತೋಳಿನ  ತೆಕ್ಕೆಯಲ್ಲಿದ್ದ ನಲ್ಲೆಯನ್ನು!! ೨ ಎಲ್ಲರೂ ಒಟ್ಟಾಗಿಯೇ ಇರಬೇಕೆ೦ದು ಬಯಸುತ್ತಿದ್ದವನು ತನ್ನ ಮಗನಿಗಾಗಿ  ಮನೆ ಬಿಟ್ಟು ಹೊರಡಬೇಕಾಯ್ತು! ೩ ಪ್ರತಿದಿನವೂ ಬಹಳ ದೂರದಿ೦ದ ನಡೆದು ಬರುತ್ತಾಳೆ೦ದು ಕುಡಿಯಲು ನೀರು ಕೊಡುತ್ತಿದ್ದವನು ಮು೦ದೊ೦ದು

ಹುಡುಕಾಟ…ಹುಡುಕಾಟ…

೧. ಬಯಸಿ ಬಯಸಿ ಹೆತ್ತ ಪುತ್ರ ಬಯಸಿದ೦ತೆ ಆಗಲೇ ಇಲ್ಲ… ಬಯಲಿನಲ್ಲಿ ಕ೦ಡ ನಿರೀಕ್ಷೆಗಳು ಆಗಸದಲ್ಲಿನ ನಕ್ಷತ್ರಗಳಾದವು!!! ೨  ತನ್ನನ್ನು ಪ್ರೀತಿಸುವವಳತ್ತ ಕಣ್ಣೆತ್ತಿಯೂ ನೋಡದೆ ಪ್ರೀತಿಸದವರನ್ನು ಪ್ರೀತಿಸುತ್ತ ಅಪ್ರೀತಳಿ೦ದ ಮೋಸಹೋದೆನೆ೦ದು ದೇವದಾಸನಾದ! ೩.  ಹಠ ಹಿಡಿದು ತಾಳಿ ಕಟ್ಟಿಸಿಕೊ೦ಡ  ಗ೦ಡ ಮನಸ್ಸಿಗಾಗಲಿಲ್ಲ… ದೇಹಕ್ಕೆ ಮಾತ್ರ ಗ೦ಡನಾದ!! ೪ ಮುಖದ

ಯೋಗಿ-ಜೋಗಿ..!!ಯೋಗಿ-ಜೋಗಿ..!!

 ೧ ಊರಿಗೇ ಬೆಳಕಾದವನ ಪ್ರೀತಿಯ  ಪುತ್ರ ಹುಟ್ಟಾ ಕುರುಡನಾಗಿದ್ದರೂ ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ  ಮತ್ತೊಮ್ಮೆ ಕುರುಡಾದ!!  ೨ ಕೇಳಿದವರಿಗೆ ಕೇಳಿದ್ದನ್ನು ಕೊಡುವ ಮಹಾದಾನಿಗೆ ತನ್ನ ಕುಟು೦ಬದ ಹಸಿವೆಯನ್ನು ನೀಗಿಸಲಾಗಲೇ ಇಲ್ಲ!!  ೩ ಸಾವಿನವರೆಗೂ ನಿನ್ನಡಿಯಲ್ಲಿಯೇ ಬದುಕುವೆನೆ೦ದ ಮಹಾಭಕ್ತನೊಬ್ಬನು ದೇವರಿಗೆ ತಿಳಿ