ಅನ್ನ ಮೀಮಾಂಸೆ

ಮಾನವ ತನ್ನ ಆಯ್ಕೆಯಲ್ಲಿ ಖಚಿತವಾಗಿರಬೇಕು. ತನಗೇನು ಬೇಕು ಮತ್ತು ಲೋಕಕ್ಕೆ/ ಸಮಾಜಕ್ಕೆ ತಾನೇನು ನೀಡಬೇಕು ಎಂಬುವುದರ ಬಗ್ಗೆ ಉಚಿತವಾದ ನಿಲುವನ್ನು ಹೊಂದಿರಬೇಕು. ತನ್ನನ್ನು ಬೆಳೆಸಿದ ಸಮಾಜಕ್ಕೂ ದೇಶಕ್ಕೂ ಕಂಟಕನಾಗಬಾರದು. ಮತ್ತೊಮ್ಮೆ ಮಾನವನು ತನ್ನ ಆಹಾರ ಪ್ರಕ್ರಿಯೆಯ ಬಗ್ಗೆ ಯೋಚಿಸುವಂತಾಗಿದೆ.

“ಪ್ರಾಣಾ ಪ್ರಾಣಭೃತಾ ಅನ್ನಂ ಅನ್ನಂ ಲೋಕೋ ಅಭಿಧಾವತಿ “

ಎಂದರೆ ಪ್ರಾಣವಿರುವ ಯಾವುದೇ ಜೀವಿ ಮಾನವನಾದಿಯಾಗಿ ಕ್ರಿಮಿ ಕೀಟಗಳೆಲ್ಲವೂ ಈ ಶರೀರವನ್ನು ಪೋಷಿಸಲು ಆಹಾರವನ್ನು ಹುಡುಕಿಕೊಂಡು ಹೋಗುತ್ತವೆ.ದೋಷ, ಧಾತು ಹಾಗೂ ಮಲಗಳಿಂದ ಕೂಡಿದ ಈ ದೇಹವನ್ನು ಪೋಷಿಸಲು ಆಹಾರ ಅತ್ಯಾವಶ್ಯಕ. ಆದರೆ ಯಾವ ಅಹಾರವನ್ನು ಸೇವಿಸಬೇಕೆನ್ನುವ ಹಾಗೂ ಬಳಸಬೇಕೆನ್ನುವ ವಿವೇಚನೆಯೂ ಅತ್ಯವಶ್ಯಕವೇ.

ಅನ್ನದಿಂದಲೇ ಜೀವಿಗಳ ಜೀವ, ಅನ್ನದಿಂದಲೇ ಜೀವಿಗಳ ತ್ರಾಣ
ಅನ್ನದಿಂದಲೇ ಜಗ ಜೀವ, ಅನ್ನಕ್ಕಾಗಿಯೇ ಜೀವದ ಹೋರಾಟ
ಅನ್ನದೇವರ ಮುಂದೆ ಇನ್ನೂ ದೇವರಿಲ್ಲ
ಅನ್ನಬೃಹ್ಮನು ಕೆಡಿಸಲುಂಟೆನಯ್ಯ ಮೃಡಗೀರಿ ಅನ್ನದಾನೀಶ.

ಭಾರತದಲ್ಲಿ ಆಹಾರವು ಒಂದು ಪದ್ಧತಿಯಾಗಿರದೇ ಸಂಸ್ಕೃತಿಯಾಗಿ ಮೆಳೈಸಿದೆ.ಇತರರಿಗೆ ಅನ್ನವನ್ನು ನೀಡುವುದನ್ನು ದಾನವೆಂದು ಕರೆಯಲ್ಪಡುತ್ತಿದೆ. ಅನ್ನವನ್ನು ದೇವರಿಗೆ ಹೋಲಿಸಲಾಗಿದೆ.ಮಠ ಮಾನ್ಯಗಳು,ದೇವಸ್ಥಾನಗಳಲ್ಲಿ ಹಾಗೂ ವಿಶೇಷ ಪೂಜೆಗಳಂದು ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು,ಆಹಾರಕ್ಕೆ ನಮ್ಮ ದೇಶವು ನೀಡಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಹಸಿವಿನಿಂದ ಮುಕ್ತಗೊಳಿಸಲು ಅನ್ನಕ್ಕಿಂತ ಮಿಗಿಲಾದ ವಸ್ತು ಯಾವುದು ಇಲ್ಲ. ಅನ್ನವೇ ದೇವರು,ಅನ್ನವೇ ಬದುಕು,ಅನ್ನವೇ ಸಂಸ್ಕತಿ, ಅನ್ನವೇ ಪ್ರಸಾದ. “ಸೋಹಂ ಎಂಬುದು ಅಂತರಂಗದ ಮದ, ಶಿವೋಹಂ ಎಂಬುದು ಬಹಿರಂಗದ ಮದ, ಈ ದಂದ್ವವನಳಿಸಿ ದಾಸೋಹಂ ಎಂದೆನಿಸಯ್ಯ” ಎಂದು ಶಿವಯೋಗಿ ಸಿದ್ಧರಾಮೇಶ್ವರರು ಹೇಳಿದರೆ, ಬಸವಣ್ಣವರು “ಜನ್ಮ ಜನ್ಮಕ್ಕೆ ಹೋಗಲೀಯದೆ, ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎನ್ನುತ್ತಾರೆ.ಸಂಪೂರ್ಣವಾಗಿ ಸಮಾಜಕ್ಕೆ ತನ್ಮೂಲಕ ಶಿವನಿಗೆ ಸಮರ್ಪಿಸಿಕೊಳ್ಳುವ ದಾಸೋಹಂಭಾವವೇ ಶ್ರೇಷ್ಠವೆನ್ನುತ್ತಾರೆ ಬಸವಾದಿ ಶಿವಶರಣರು.

ಅನ್ನ ದಾನ೦ ಸಮ೦ ದಾನ೦ ತ್ರಿಲೋಕೇಷು ನ ವಿಧತೇ| -ಇದು ವೇದೋಕ್ತಿ.ಎ೦ದರೆ ಅನ್ನದಾನಕ್ಕೆ ಸಮನಾದ ದಾನವು ಬೇರೊ೦ದಿಲ್ಲ. ಇದು ಅತ್ಯ೦ತ ಶ್ರೇಷ್ಟ ದಾನವು ಎಲ್ಲಾ ಮಾನವರ ಮೂಲಭೂತ ಅವಶ್ಯಕತೆ ಅನ್ನ-ಈ ವಿಶ್ವದ ಉತ್ಪತ್ತಿ ಮತ್ತು ಬೆಳವಣಿಗೆ ಅನ್ನವನ್ನು ಆಧರಿಸಿದೆ.ವೇದಗಳಲ್ಲಿ ಹೇಳಿದ೦ತೆ ಹಸಿದವರಿಗೆ ಮಾಡುವ ಅನ್ನ ದಾನದಿ೦ದ ಪುಣ್ಯಲೋಕ ಪ್ರಾಪ್ತಿಯಾಗುವುದು. ಸಕಲ ಜೀವ ರಾಶಿಗಳಿಗೆ ಶಕ್ತಿಯನ್ನು ಕೊಡುವುದೇ ಅನ್ನ. ಅದಕ್ಕಾಗಿಯೇ ಶ೦ಕರಾಚಾರ್ಯರು ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆಯನ್ನು “ಅನ್ನಪೂರ್ಣೇ ಸದಾಪೂರ್ಣೇ ಶ೦ಕರ ಪ್ರಾಣವಲ್ಲಭೇ” ಎ೦ದು ಸ್ತುತಿಸಿದ್ದಾರೆ. ಮಹಾಭಾರತದಲ್ಲಿ ಶ್ರೀಕೃಷ್ಣನು (ಶಾ೦ತಿ ಪರ್ವದಲ್ಲಿ) ಭೀಷ್ಮನಿಗೆ ದಾನದ ಮಹತ್ವದ ಬಗ್ಗೆ ಈ ರೀತಿ ಹೇಳುತ್ತಾನೆ :

ಈ ಚರಾಚರ ಪ್ರಪ೦ಚವು ಅನ್ನದಿ೦ದ ಆಧರಿಸಲ್ಪಟ್ಟಿದೆ.ಯಾವನು ಆಹಾರವನ್ನು ಕೊಡುತ್ತಾನೋ ಅವನು ಜೀವನವನ್ನು ಕೊಟ್ಟ೦ತೆ.ಆದ್ದರಿ೦ದ ಯಾರು ಈ ಲೋಕ ಮತ್ತು ಪರಲೋಕದಲ್ಲಿ ಸುಖದಿ೦ದ ಇರಲು ಬಯಸುತ್ತಾನೋ ಅವನು ಅನ್ನ(ಆಹಾರ)ವನ್ನು ದಾನ ಮಾಡಲು ಪ್ರಯತ್ನಿಸ ಬೇಕು.ಈ ಆಹಾರವನ್ನು ಸೌಜನ್ಯತೆಯಿ೦ದ ಪ್ರಾಯಸ್ಥರಿಗೆ,ಅಶಕ್ತರಿಗೆ,ಮಕ್ಕಳಿಗೆ ಮತ್ತು ಪ್ರಯಾಣಿಕರಿಗೆ ಕೊಡಬೇಕು.

ಭಗವದ್ಗೀತೆಯಲ್ಲಿ :ಅನ್ನಾತ್ ಭವ೦ತಿ ಭೂತಾನಿ-ಎಲ್ಲಾ ಜೀವಿಗಳು ಅನ್ನದಿ೦ದ ವಿಕಾಸವಾಗುತ್ತವೆ.ಎಲ್ಲಾ ದೇವ ದೇವತೆಗಳು ಕ್ರಮಬದ್ಧವಾದ ಅನ್ನ ದಾನದಿ೦ದ ಸ೦ಪ್ರೀತರಾಗುತ್ತಾರೆ.ಅನ್ನ ದಾನವು ಶಕ್ತಿಯನ್ನು ಕೊಡುವುದರೊ೦ದಿಗೆ ಬೌದ್ಧಿಕತೆಯನ್ನು,ದಿವ್ಯ ಚೈತನ್ಯವನ್ನು ದಾನಿಗಳಿಗೂ,ಪಡೆಯುವವರಿಗೂ ನೀಡುತ್ತದೆ. ಬ್ರಹ್ಮ ಹತ್ಯಾಕೃತ೦ ಪಾಪ೦ ಅನ್ನ ದಾನಾತ್ ಪ್ರಣಶ್ಯತಿ-ಮಹಾ ಪಾತಕವನ್ನು,ಪಾಪವನ್ನು ಅನ್ನ ದಾನವು ತೊಳೆದು ಹಾಕುವುದು. ಮನಮೆಗೆ ಬಂದವರನ್ನು ಆಹಾರವಿಕ್ಕೆದೆ ಕಳುಹಿಸುವುದು ಭಾರತೀಯ ಸಂಸ್ಕೃತಿಯಲ್ಲ ಎನ್ನುವುದು ವಿದಿತ. ಹಸಿವಿನ ಸಮಸ್ಯೆ ಬಹಳ ಘೋರವಾದದ್ದು, ಹಸಿವಿನಿಂದ ಬಳಲುವ ಮನುಷ್ಯ ತುತ್ತು ಅನ್ನಕ್ಕಾಗಿ ಪರದಾಡುವುದು ನಿಶ್ಚಿತ.ಮನುಷ್ಯನಾದವನು ಏನೆಲ್ಲಾ ಪ್ರಗತಿ ಸಾಧಿಸಿದರೂ ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಹೊತ್ತೊತ್ತಿಗೆ ಹೊಟ್ಟೆ ತುಂಬ ಊಟ ಕೊಡುವುದು ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿ ಎರಡು ವಿಧದ ಜನರನ್ನು ನೋಡಬಹುದು.ಒಂದು ವರ್ಗದ ಜನರು ಆಹಾರಕ್ಕಾಗಿ ತಿರುಗಾಡಿದರೆ,ಇನ್ನೊಂದು ವರ್ಗದ ಜನ ತಿಂದ ಆಹಾರವನ್ನು ಅರಗಿಸಿಕೊಳ್ಳಲು ತಿರುಗುತ್ತಾರೆ.ಹಸಿವು,ಬಡತನ ಮತ್ತು ಆಹಾರದ ಬೆಲೆಗಳು ಒಂದಕ್ಕೊಂದು ಸಂಬಂಧಿಸಿದ್ದಾಗಿದ್ದು, ಬಡತನವು ಹಸಿವೆಗೆ ಕಾರಣವಾಗುತ್ತದೆ. ಅದಕ್ಕೆ ಆಹಾರದ ಪೋಲು ಇಂದು ಕ್ಷಮಿಸಲಾಗದ ಅಪರಾಧವಾಗಿದೆ. ಅನ್ನದಾನವು ಸದಾಚಾರವು.ಅನ್ನ ಪರಬ್ರಹ್ಮ ಸ್ವರೂಪ. ಆಹಾರವನ್ನು ವೃಥಾಗೊಳಿಸುತ್ತಿದ್ದೇವೆ ಎಂದರೆ ನಮ್ಮ ಉತ್ಪಾದನೆಯನ್ನು ವೃಥಾ ಮಾಡುತ್ತಿದ್ದೇವೆ ಎಂದೇ ಅರ್ಥ. ಸದಾಚಾರವನ್ನು ಮಿಳಿತಗೊಳಿಸಿಕೊಳ್ಳೋಣ. ಪರೋಪಕಾರ ಹಾಗೂ ದಾನ ಮಾಡುವ ಸಾತ್ವಿಕತೆಯನ್ನು ಬೆಳೆಸಿಕೊಳ್ಳೋಣ

Leave a Reply

Your email address will not be published. Required fields are marked *

Related Post

ಆನ್ಲೈನ್ ವೈದ್ಯರು ಮತ್ತು ಚಿಕಿತ್ಸೆಆನ್ಲೈನ್ ವೈದ್ಯರು ಮತ್ತು ಚಿಕಿತ್ಸೆ

ಇಂಟರ್ನೆಟ್ಟೆಂಬ ಮಹಾ ಸಾಮ್ರಾಜ್ಯದಲ್ಲಿ ಎಲ್ಲ ಬಗೆಯ ಜನರಿದ್ದಾರೆ. ಶಿಕ್ಷಣ ತಜ್ಞರು, ಬ್ಯಾಂಕ್ ಕುಶಲಿಗಳು, ಅರ್ಥಶಾಸ್ತ್ರ ಪ್ರವೀಣರು, ರಾಜಕೀಯ ವಿಶ್ಲೇಷಕರು, ಸಿನಿಮಾ ವಿಮರ್ಶಕರು, ಎಲ್ಲರೂ ಸಿಗುವ ಪ್ರಪಂಚ ಈ ಫೇಸ್ ಬುಕ್. ಫೇಸ್ ಬುಕ್ಕೆಂದರೆ ಇದೊಂದೇ ಎಂದಲ್ಲವಲ್ಲ, ಇದರಂತೆಯೆ ಇರುವ ಹಲವಾರು ಸಾಮಾಜಿಕ ತಾಣಗಳು, ಒಟ್ಟಾರೆಯಾಗಿ ಹೇಳುವುದಾದರೆ ಆನ್ಲೈನ್ ಎಂಬಲ್ಲಿ

ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ….2ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ….2

ಭಾಗ ಒ೦ದರಿ೦ದ… ಈ ದೃಷ್ಟಿಯಲ್ಲಿ ಕೆಲವರಿಗೆ ಇದು ಯಜಮಾನ್ಯದ ಭಾಷೆ ಎ೦ದೆನ್ನಿಸಬಹುದು. ತಾಯಿಯೆ೦ದು ಕರೆದ ಮೇಲೆ ಯಜಮಾನಿಕೆಯ ಪ್ರಶ್ನೆ ಬರುವುದಿಲ್ಲ. ಸ೦ಸ್ಕೃತ ಎ೦ದೂ ಯಜಮಾನಿಕೆಯಿ೦ದ ಮೆರೆಯಲಿಲ್ಲ. ಅದು ಕನ್ನಡದ ಅಸ್ತಿತ್ವಕ್ಕೆ ಎ೦ದೂ ತೊ೦ದರೆಕೊಟ್ಟಿಲ್ಲ. ವಾಸ್ತವವಾಗಿ ನೋಡಿದರೆ ಆ೦ಗ್ಲ ಭಾಷೆ ಯಜಮಾನಿಕೆಯ ಭಾಷೆ. ಆ೦ಗ್ಲ ಭಾಷೆ ಮತ್ತು ಸ೦ಸ್ಕೃತಿ, ಕನ್ನಡ

ಮತ, ಧರ್ಮ, ಸಂಸ್ಕೃತಿ ಹಕ್ಕುಮತ, ಧರ್ಮ, ಸಂಸ್ಕೃತಿ ಹಕ್ಕು

ಧರ್ಮ ಎಂದರೇನು? “ಧರ್ಮ”.“ ಧಾರಯತಿ ಇತಿ ಧರ್ಮಃ “ – ಯಾವುದು ಧರಿಸಲ್ಪಡುವುದೋ ಅದು ಧರ್ಮ. ಪದ ಸರ್ವಕಾಲಿಕ. ಸದಾಚಾರ, ನ್ಯಾಯ ಹಾಗು ಕರ್ತವ್ಯವೆಂಬುವಂತಹ ಅರ್ಥ ಹೊಂದಿರುವ ಈ ಪದವು ಕಾಲಕಾಲಕ್ಕೆ ಬದಲಾಗುವಂತಹ, ಮನುಷ್ಯನ ನೀತಿ ನಿಯಮಗಳ ಚೌಕಟ್ಟನ್ನು ತಿಳಿಸಿಕೊಡುವ, ಸಮಾಜ ಕಲ್ಯಾಣಕ್ಕೆ ಕಾರಣವಾಗುವ, ವೈಯಕ್ತಿಕ ಬೆಳವಣಿಗೆ ಹಾಗು