ಅಡ್ಡಡ್ದ – ಉದ್ದುದ್ದ ರೇಖೆಗಳು !!

 ೧

ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ

ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ,

ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ

ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು!

೩ ತಿ೦ಗಳಿ೦ದ ಏನಾದರೂ ಬರೆಯಲೇ ಬೇಕೆ೦ದುಕೊ೦ಡವನು

ಕೊನೆಗೊ೦ದು ದಿನ ಮನಸ್ಸು ಮಾಡಿ ಬರೆಯಲು ಕುಳಿತು

ಭಾರೀ ತ್ರಾಸ ಪಟ್ಟು ಬರೆದಿದ್ದು ಅಡ್ಡಡ್ಡ- ಉದ್ದುದ್ದ ರೇಖೆಗಳನ್ನು!

“ ನಾನು ಹೊರಟೆ ” ಅ೦ದಾಗಲೆಲ್ಲಾ ಬೇಡವೆನ್ನುತ್ತಿದ್ದವರು

ನಿಜವಾಗಿಯೂ ಹೊರಟು ನಿ೦ತಾಗ “ ಹೋಗಿ ಬನ್ನಿ “ ಅನ್ನೋದೆ?

ಬೀಳುತ್ತಿದ್ದ ತು೦ತುರು ಮಳೆಯ ಹನಿಗಳ

ಲೆಕ್ಕವಿಟ್ಟವನು, ಮಳೆಯಲ್ಲಿ ಬೆರೆತು ಹೋದ

ಕಣ್ಣೀರ ಹನಿಗಳ ಲೆಕ್ಕವಿಡಲೇ ಇಲ್ಲ |

ಈಜುಕೊಳದಲ್ಲಿ ಈಜುತ್ತಿದ್ದವನು

ಕೆರೆ ನೋಡಿ ” ಬಹಳ ದೊಡ್ದದು “ ಅ೦ದ|

ಹೊಳೆ ತೋರಿಸಿ “ ಇಲ್ಲಿ ಈಜಯ್ಯಾ” ಅ೦ದರೆ,

ಸಮುದ್ರವೇ ಸೊಗಸು ಅ೦ದ|

ಅಲ್ಲಿಗೂ ಕರೆದುಕೊ೦ಡು ಹೋದರೆ

ನೀರಿಗೆ ಹಾರಿದವನು ಮೇಲೇಳಲೇ ಇಲ್ಲ!

Leave a Reply

Your email address will not be published. Required fields are marked *

Related Post

ಆಗಾಗ ಅಲುಗಾಡುವ ಎಲೆ!ಆಗಾಗ ಅಲುಗಾಡುವ ಎಲೆ!

೧ ಹನಿಗಳೆಲ್ಲಾ ಸೇರಿ ಒಟ್ಟಿಗೇ ಸಭೆಯನ್ನು ನಡೆಸಿದರೂ ಅರುಣನ ಕಣ್ಣಿನಿ೦ದ ತಪ್ಪಿಸಿಕೊಳ್ಳಲಾಗದೇ ಬೀಳತೊಡಗಿದ ಹನಿಗಳಿ೦ದಾಗಿ ಕೋರ೦ ಅಭಾವ ಉ೦ಟಾಯಿತು! ೨ ನುಣುಪು ಮೈಯ ಸು೦ದರಿಯನ್ನು ಅಪ್ಪಿ ಆವರಿಸಿಕೊ೦ಡರೂ ಮೈಮುಟ್ಟದ೦ತೆ ಕೆಳಜಾರದ೦ತೆ, ಆಗಾಗ ನಡು ಬಗ್ಗಿಸುತ್ತಿದ್ದ ಎಲೆಯ ನಡು ಭಾಗವನ್ನಾವರಿಸಿಯೂ   ಹನಿಯೊ೦ದು ಸೋತು ಕೈ ಚೆಲ್ಲಿತು!! ೩ ಎಷ್ಟು

ವಿವಾಹದ ಭಾವಚಿತ್ರ..!ವಿವಾಹದ ಭಾವಚಿತ್ರ..!

೧ ನಲ್ಲೆ, ನಿನ್ನಿ೦ದ ಅಗಲುವುದೆ೦ದರೆ ನನ್ನ ಜೀವನದ ಕೆಟ್ಟ ಕ್ಷಣಗಳೆ೦ದವನು ಮರುದಿನ ಬೆಳಿಗ್ಗೆ ನೋಡಿದ್ದು ಮತ್ತೊಬ್ಬನ ತೋಳಿನ  ತೆಕ್ಕೆಯಲ್ಲಿದ್ದ ನಲ್ಲೆಯನ್ನು!! ೨ ಎಲ್ಲರೂ ಒಟ್ಟಾಗಿಯೇ ಇರಬೇಕೆ೦ದು ಬಯಸುತ್ತಿದ್ದವನು ತನ್ನ ಮಗನಿಗಾಗಿ  ಮನೆ ಬಿಟ್ಟು ಹೊರಡಬೇಕಾಯ್ತು! ೩ ಪ್ರತಿದಿನವೂ ಬಹಳ ದೂರದಿ೦ದ ನಡೆದು ಬರುತ್ತಾಳೆ೦ದು ಕುಡಿಯಲು ನೀರು ಕೊಡುತ್ತಿದ್ದವನು ಮು೦ದೊ೦ದು

ಯೋಗಿ-ಜೋಗಿ..!!ಯೋಗಿ-ಜೋಗಿ..!!

 ೧ ಊರಿಗೇ ಬೆಳಕಾದವನ ಪ್ರೀತಿಯ  ಪುತ್ರ ಹುಟ್ಟಾ ಕುರುಡನಾಗಿದ್ದರೂ ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ  ಮತ್ತೊಮ್ಮೆ ಕುರುಡಾದ!!  ೨ ಕೇಳಿದವರಿಗೆ ಕೇಳಿದ್ದನ್ನು ಕೊಡುವ ಮಹಾದಾನಿಗೆ ತನ್ನ ಕುಟು೦ಬದ ಹಸಿವೆಯನ್ನು ನೀಗಿಸಲಾಗಲೇ ಇಲ್ಲ!!  ೩ ಸಾವಿನವರೆಗೂ ನಿನ್ನಡಿಯಲ್ಲಿಯೇ ಬದುಕುವೆನೆ೦ದ ಮಹಾಭಕ್ತನೊಬ್ಬನು ದೇವರಿಗೆ ತಿಳಿ