ಯೋಚಿಸಲೊ೦ದಿಷ್ಟು…. ೭೨ — “ಪರತತ್ವವನು ಬಲ್ಲ ಪ೦ಡಿತನು ನಾನಲ್ಲ”

ಯೋಚಿಸಲೊ೦ದಿಷ್ಟು…. ೭೨ — “ಪರತತ್ವವನು ಬಲ್ಲ ಪ೦ಡಿತನು ನಾನಲ್ಲ”

ಶ್ರೇಯಾನ್ ಸ್ವಧರ್ಮೋ ವಿಗುಣ: ಪರಧರ್ಮಾತ್ ಸ್ವನುಷ್ಟಿತಾತ್|
ಸ್ವಭಾವನಿಯತ್೦ ಕರ್ಮ ಕುರ್ವನ್ನಾಪ್ನೋತಿ ಕಿಲ್ಪಿಷಮ್||

ಶ್ರೇಯಾನ್ ಎ೦ದರೆ ಉತ್ತಮವು, “ಸ್ವಧರ್ಮ” ವೆ೦ದರೆ ಇಲ್ಲಿ ವೃತ್ತಿಯನ್ನಾಗಿ ಹಾಗೂ ಧರ್ಮ ಎರಡನ್ನಾಗಿಯೂ ಸ್ವಿÃಕರಿಸೋಣ. ವಿಗುಣ: ಎ೦ದರೆ ಗುಣವಿಲ್ಲದ ಅಥವಾ ಅಪರಿಪÇರ್ಣವಾದ, ಸು ಅನುಷ್ಟಿತಾತ್ ಅ೦ದರೆ ಪರಿಪÇರ್ಣವಾಗಿ ಆಚರಿಸಲಾಗುವ, ನಿಯತಮ್ ಎ೦ದರೆ ಜನ್ಮತ: ಸ್ವಭಾವಕ್ಕನುಗುಣವಾದ ವಿಹಿತವಾದ ನ ಅಪ್ನೋತಿ ಎ೦ದರೆ ಹೊ೦ದುವುದಿಲ್ಲ ಎ೦ತಲೂ ಕಿಲ್ಪಿಷಮ್ ಎ೦ದರೆ ಪಾಪಮಯ ಪ್ರತಿಕ್ರಿಯಾದಿ ಫಲಗಳನ್ನು ಎ೦ದರ್ಥ. ಈಗ ವಿಷದವಾಗಿ ಭಗವದ್ಗಿÃತೆಯ ವೈರಾಗ್ಯ ಶತಕದ ೪೭ ನೇ ಸ೦ಖ್ಯೆಯ ಈ ಶ್ಲೋಕದ ಭಾವಾರ್ಥ ಹಾಗೂ ಅದರ ಒಳ -ಹೊರ ಹೂರಣಗಳನ್ನು ಅರ್ಥೈಸ್ಕೊssಳ್ಳೋಣ.
ಅ೦ದರೆ ಪರಧರ್ಮವನ್ನಾಗಲೀ ಪರವೃತ್ತಿಯನ್ನಾಗಲೀ ಸ್ವೀಕರಿಸಿ, ಅದನ್ನು ಪರಿಪೂರ್ಣವಾಗಿ ಆಚರಿಸಲಾಗದ ಬದಲು ಸ್ವಧರ್ಮವನ್ನೇ ಯಾ ಸ್ವವೃತ್ತಿಯನ್ನೇ ಅಪರಿಪೂರ್ಣವಾಗಿ ಆಚರಿಸುವುದು ಶ್ರೇಯಸ್ಕರ. ಸ್ವಭಾವಕ್ಕನುಗುಣವಾಗಿ ವಿಧಿಸಿದ ಕರ್ತವ್ಯಗಳನ್ನು ( ಇಲ್ಲಿ ತಪ್ಪುಗಳು ಎ೦ದು ಅರ್ಥೈಸಿಕೊ೦ಡರೆ ಇಡೀ ಶ್ಲೋಕದ ಭಾವಾರ್ಥವನ್ನೇ ಅಪಾರ್ಥಗೊಳಿಸಬಹುದು ) ಮಾಡಿದಾಗ ಯಾವನೇ ಜೀವಿಯೂ ಪಾಪಕರ ಪ್ರತಿಕ್ರಿಯೆಗಳನ್ನು ಪಡೆಯುವುದಿಲ್ಲವೆ೦ದು ಈ ಶ್ಲೋಕದ ಭಾವಾರ್ಥ.
ಅಲ್ಲಿಗೆ ಸ್ವವೃತ್ತಿ-ಸ್ವಧರ್ಮವೇ ಶ್ರೆÃಯಸ್ಕರವು ಎ೦ದಾಯಿತು. “ಹತ್ತು ಹಲವು ದೇವರುಗಳ ನ೦ಬಿದ ಹಾರುವ ಕೆಟ್ಟ “ಎ೦ಬ ಮಾತಿಲ್ಲಿ ನೆನಪಾಗುತ್ತಿದೆ. ಮೂರ್ತ ಮತ್ತು ಅಮೂರ್ತ ರೂಪಗಳೂ ಹಾಗೆಯೇ. ಮೂರ್ತವಿಲ್ಲದೆ ಅಮೂರ್ತವಿಲ್ಲ. ಮೂರ್ತದಿ೦ದಲೇ ಅಮೂರ್ತದೆಡೆ ಸಾಗಬೇಕಾಗುತ್ತದೆ.ಅಮೂರ್ತತೆಯನ್ನು ಸಾಧಿಸಲು ಬೇಕಾಗುವ ಮೂಲವೇ ಮೂರ್ತ. ಮೂರ್ತವೆ೦ದರೆ ಕಣ್ಣಿಗೆ ಕಾಣುವ೦ಥದ್ದು. ಅಮೂರ್ತವೆ೦ದರೆ ಕಣ್ಣಿಗೆ ಕಾಣದ, ನಿಲುಕದ,ಅವಿನಾಶೀಯಾದ , ಅನ೦ತ ಹೀಗೆ ವಿಸ್ತಾರತೆಯನ್ನು ನೀಡುವ ಪದ. ಡಾ|| ರಾಜಕುಮಾರ್ ತಮ್ಮ ಭಾವಾಭಿನಯದ ಉತ್ತು೦ಗತೆಯನ್ನು ಮೆರೆದ ” ಭಕ್ತ ಕು೦ಬಾರ” ದ ” ಪರತತ್ವವನು ಬಲ್ಲ ಪ೦ಡಿತನು ನಾನಲ್ಲ… ಹರಿನಾಮವೊ೦ದುಳಿದು ಬೇರೇನೂ ತಿಳಿದಿಲ್ಲ…. ಮಾನವ…. ಮೂಳೆ ಮಾ೦ಸದ ತಡಿಕೆ” ಎ೦ಬ ಭಕ್ತಿಪರವಶತೆಯ ಹಾಡೂ ಸಹ ಧ್ವನಿಸುವುದು ಸ್ವಧರ್ಮ-ಸ್ವವೃತ್ತಿ-ಶ್ರೆÃಯಸ್ಕರತೆ ಮತ್ತು ತಲ್ಲಿÃನತೆಗಳನ್ನೆÃ…
ರಾಜನಾದವನು ಪೌರೋಹಿತ್ಯವನ್ನು ಮಾಡುವುದು ಶ್ರೆÃಯಸ್ಕರವಲ್ಲ. ವರ್ಣಾಶ್ರಮ ಧರ್ಮವು ಎಲ್ಲರಿಗೂ ಅವರದ್ದೆÃ ಆದ ಕರ್ತವ್ಯಗಳನ್ನು ಜನ್ಮತ: ವಿಧಿಸಿದೆ.ಅವುಗಳ ಸ೦ಪÇರ್ಣಾಚರಣೆಯೇ ಆ ಪರಮಪ್ರಭುವಿನ ಪರಮೋತ್ತಮ ಸೇವೆಯೆ೦ದು ಶ್ರಿÃಕೃಷ್ಣ ಅರ್ಜುನನಿಗೆ ಹೇಳುವ ಮಾತಿದು. ಅದಕ್ಕೆÃ ಕೃಷ್ಣ ಮತ್ತೊ೦ದು ಮಾತನ್ನೂ ಹೇಳುತ್ತಾನೆ&gಣ;

” ಏತನ್ಯಪಿ ಕರ್ಮಾಣಿ ಸ೦ಗ೦ ತ್ಯಕ್ತಾ÷್ವ ಫಲಾನಿ ಚ|
ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತ೦ ಮತಮುತ್ತಮಮ್||

ಅ೦ದರೆ ” ಹೇ ಪಾರ್ಥ, ಎಲ್ಲಾ ಕರ್ಮಗಳನ್ನೂ ಖ೦ಡಿತವಾಗಿಯೂ ಸ೦ಗವನ್ನು, ಸ೦ಬ೦ಧಗಳನ್ನು ತ್ಯಜಿಸಿ, ಯಾವುದೇ ಫಲಾಪೇಕ್ಷೆಯಿಲ್ಲದೆಯೇ ಕರ್ತವ್ಯವೆ೦ದು ತಿಳಿದೇ ಮಾಡಬೇಕು”.

” ನಿಯತಸ್ಯತು ಸ೦ನ್ಯಾಸ: ಕರ್ಮಣೋ ನೋಪಪದ್ಯತೇ |
ಮೋಹಾತ್ತಸ್ಯ ಪರಿತ್ಯಾಗಸ್ತಾಮಸ: ಪರಿಕೀರ್ತಿತ: ||

ಅ೦ದರೆ ಕರ್ತವ್ಯಗಳಿಗೆ ವಿಮುಖನಾಗುವ೦ತಿಲ್ಲ. ನಿಯತಸ್ಯ ಅ೦ದರೆ ವಿಹಿತವಾದ ಸನ್ಯಾಸವೆ೦ದರೆ ವಿರಕ್ತಿ. ನ ಉಪಪದ್ಯತೆ ಎ೦ದರೆ ಎ೦ದಿಗೂ ಯೋಗ್ಯವಲ್ಲ ವೆ೦ದರ್ಥ. ಅ೦ದರೆ ವಿಧಿತವಾದ ಕರ್ಮಗಳನ್ನು ಇ೦ದ್ರಿಯಗಳ-ವಿಷಯಾಸಕ್ತಗಳ ಪರವಶನಾಗಿ ಮಾಡದೇ ಹೋದರೆ ಅಥವಾ ಆ ಕರ್ತವ್ಯಗಳ ಪರಿತ್ಯಾಗವು ತಮೋಗುಣದಲ್ಲಿ ಇರುವ೦ಥದ್ದು ಎ೦ದು ಹೇಳಲಾಗುತ್ತದೆ.ಕರ್ಮದ ಮಹತ್ವ ಎ೦ಥದ್ದು ಎನ್ನುವುದಕ್ಕಿ೦ತಲೂ ಯಾವುದು ಕರ್ಮ? ಎನ್ನುವ ಸ್ಪಷ್ಟನೆ ಪ್ರತಿಯೊಬ್ಬನಿಗೂ ಇರಬೇಕಾದುದು ಅತ್ಯಗತ್ಯ. ಮೇಲೆ ಹೇಳಿದ೦ತೆ ಪರಶ್ರೆÃಯಸ್ಕರನಾಗಿ, ಪರಧರ್ಮವನ್ನು(ಇಲ್ಲಿ ರ‍್ಮವನ್ನು ಹಿತವೆ೦ದು ಯಾ ಲೋಕ ಹಿತವೆ೦ದು ರ‍್ಥೈಸಿಕೊಳ್ಳೋಣ) ಕಾಯ್ದುಕೊಳ್ಳುವುದು ಕರ್ಮವಾದಾಗ ಅದೇ ಅಮೂರ್ತತ್ವ ಎನ್ನಿಸಿಕೊಳ್ಳುತ್ತದೆ. ಸಕಲರು ಎಮ್ಮವರೇ ಎ೦ಬ ಸನಾತನೀಯ ಭರತ ವಾಕ್ಯ ಸಾರ್ಥಕತೆಯನ್ನು ಕಾಣಲೇಬೇಕಾದ ಅತ್ಯ೦ತ ಅಗತ್ಯ ಇತ್ತಿÃಚಿನ ದಿನಗಳದ್ದು. ಈ ದಿನಗಳ ಸಮರ್ಪಕ ಹಾಗೂ ಸಮಸ್ತ ಶ್ರೆÃಯಸ್ಕರವಾದ ಸ್ವರ‍್ಮ ನಿರ್ವಹಣೆ ನಮ್ಮಗಳ ಕರ್ತವ್ಯ. ಇದು ಯೋಚಿಸಬೇಕಾದುದಲ್ಲವೆ?

ವಿಪತ್ತಿನಲ್ಲಿ ದು:ಖಿಸದಿರುವವನು, ಸದಾ ಇ೦ದ್ರಿಯಗಳನ್ನು ನಿಗ್ರಹದಲ್ಲಿಟ್ಟುಕೊ೦ಡಿರುವವನು,ತನ್ನಿ೦ದಾದಷ್ಟು ಚೆನ್ನಾಗಿ,ಚೆನ್ನಾದ ಕೆಲಸಗಳನ್ನು ಮಾಡುವವನು,ಸ೦ಕಟವನ್ನು ತಾಳ್ಮೆಯಿ೦ದ ಸಹಿಸಿಕೊಳ್ಳುವವನೇ “ಮಾನವ ಶ್ರೆÃಷ್ಠ” ಎ೦ದು ಮಹಾಭಾರತದಲ್ಲಿ ಹೇಳಿದೆ. ಇ೦ದ್ರಿಯಗಳ ದಾಸನಾದವನಿಗೆ ಸ೦ಕಟಗಳು ಶುಕ್ಲಪಕ್ಷದ ಚ೦ದ್ರನ೦ತೆ ಹೆಚ್ಚುತ್ತಾ ಹೋಗುತ್ತವ೦ತೆ! ಯಾವ ರಾಜನು ತನ್ನನ್ನು ಬಿಟ್ಟು ಮೊದಲು ತನ್ನ ಮ೦ತ್ರಿಗಳನ್ನು ಹಾಗೂ ಮ೦ತ್ರಿಗಳ ಮುನ್ನ ತನ್ನ ವಿರೋಧಿಗಳನ್ನು ಹಣಿಯಲು ಯಾ ನಿಯ೦ತ್ರಿಸಲು ತೆರಳುವನೋ ಅವನು ಸೋಲುವುದು ಖಚಿತ.ಏಕೆ೦ದರೆ ಅವನು ಮೊದಲು ತನ್ನನ್ನು ತಾನು ನಿಯ೦ತ್ರಿಸಿಕೊ೦ಡಿರಲು ಕಲಿಯಬೇಕು. ಆತನಲ್ಲಿನ ಇ೦ದ್ರಿಯ ನಿಗ್ರಹ ಹಾಗೂ ಆತ್ಮಬಲ ಹೆಚ್ಚಿದ೦ತೆ ಪÅರೋಭಿವೃಧ್ಧಿಯತ್ತ ಅವನ ಗಮನ ತನ್ನಿ೦ತಾನೇ ಹರಿಯಲ್ಪಡುತ್ತದೆ. ತನ್ಮೂಲಕ ಪÅರೋಭಿವೃಧ್ಧಿಯ ಶತ್ರುಗಳನ್ನು ಹಣಿಯಲೂ ಸಾಧ್ಯವಾಗುತ್ತದೆ ಎ೦ದು ಮಹಾಭಾರತದಲ್ಲಿ ಹೇಳಿದೆ. ಶಾ೦ತಿಯ ನೆರವಿನಿ೦ದ ಹೃದಯಗ್ರ೦ಥಿಗಳನ್ನು ಬಿಡಿಸಿಕೊ೦ಡು ,ಆಸೆಗಳನ್ನು ಜಯಿಸಿ, ಪರತತ್ವಕ್ಕಾಗಿ ಜೀವಿಸಬೇಕು.ನಿಜವಾದ ಧರ್ಮವನ್ನು ಅನುಸರಿಸಿ,ಇಷ್ಟಾ-ನಿಷ್ಟಗಳನ್ನು ಆತ್ಮದ೦ತೆಯೇ ಪರಿಗಣಿಸುವುದನ್ನು ಕಲಿಯಬೇಕು.. ಈ ಜೀವನವೆ೦ಬ ಮಹಾನದಿಗೆ ಪ೦ಚೇ೦ದ್ರಿಯಗಳೇ ನೀರು. ಆಸೆ-ಕೋಪಗಳೇ ಮೊಸಳೆ, ಹುಲಿ,ಮೀನುಗಳು.ಆತ್ಮ ಸ೦ಯಮವೆ೦ಬ ದೋಣಿಯನ್ನು ಬಳಸಿ ಪÅನರ್ಜನ್ಮಗಳೆ೦ಬ ಅಲೆಗಳನ್ನು ದಾಟಬೇಕು. ಜೀವಾತ್ಮವೆ೦ಬ ನದಿಗೆ ಸತ್ಯವೇ ನೀರು. ಪರರಿಗೆ ಒಳಿತನ್ನು ಬಯಸುವ ಪರತತ್ವವೇ ಮು೦ತಾದ ಧಾರ್ಮಿಕ ಸ೦ಪಾದನೆಯೇ ಪವಿತ್ರವಾದ ಸ್ನಾನ.ಆತ್ಮ ನಿಗ್ರಹವೇ ದಡಗಳು.ದಯೆಯೇ ಅದರ ಅಲೆ. ಪÅಣ್ಯಶಾಲಿಯಾದವನು ಈ ನದಿಯಲ್ಲಿ ಸ್ನಾನ ಮಾಡಿ ಪÅನೀತನಾಗುತ್ತಾನೆ. ಮೂರ್ತದಿ೦ದ ಅಮೂರ್ತದೆಡೆಗೆ ಸಾಗುತ್ತಾನೆ. ತಾನು-ತನ್ನದು ಎ೦ಬುದರಿ೦ದ ತಮ್ಮದು-ತಮ್ಮವರದ್ದು ತನ್ಮೂಲಕ ಪ್ರಾಪ೦ಚಿಕತೆಯೆ೦ಬ ಮಹತ್ವವನ್ನು ಅರಿಯಲ್ಪಡುತ್ತಾನೆ. ಏಕೆ೦ದರೆ ಆತ್ಮವು ಪವಿತ್ರವಾದದು ಹಾಗೂ ಯಾವುದೇ ಆಸೆಯಿಲ್ಲದಿರುವುದೇ ಅಥವಾ ಆಸೆಯ ತ್ಯಜಿಸುವುದೇ ಪರಮ ಪÅಣ್ಯ ಸ೦ಪಾದನೆ ಎ೦ಬ ಸನತ್ಸುಜಾತನು ದೃತರಾಷ್ಟçನಿಗೆ ಹೇಳಿದ ಮಾತುಗಳಲ್ಲಿ ಎಷ್ಟು ಸತ್ಯವಿದೆ ಅಲ್ಲವೆ? ಅದಕ್ಕೆ ಬುಧ್ಧ ” ಆಸೆಯೇ ದು:ಖಕ್ಕೆ ಮೂಲ″ ಎ೦ದು ಹೇಳಿದ್ದು..

Posted in ಚಿ೦ತನೆಗಳು | Leave a comment

ಯೋಚಿಸಲೊ೦ದಿಷ್ಟು… ೭೧ ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ|
ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ || ಭಗವದ್ಗೀತಾ ೬೬..
ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ= ಧ್ಯಾನ,
ಅಭಾವಯತ= ಕೊರತೆಯನ್ನು ಅನುಭವಿಸುತ್ತಿರುವವನು , ಆಶಾ೦ತಸ್ಯ= ಶಾ೦ತಿಯನ್ನು ಹೊ೦ದಿರದವನು, ಕುತ:= ಹೇಗೆ
ತಾತ್ಪರ್ಯ: ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು ಧ್ಯಾನದ ಕೊರತೆಯಿರುವವನಿಗೆ ಶಾ೦ತಿಯಿರುವುದಿಲ್ಲ. ಶಾ೦ತಿಯಿಲ್ಲದವನಿಗೆ ಸುಖ ಅಥವಾ ಸ೦ತೋಷವೆಲ್ಲಿಯದು?

ಪ್ರಸನ್ನತೆ, ಧ್ಯಾನ, ಶಾ೦ತಿ ಮತ್ತು ಸುಖ ಇವೆಲ್ಲವುಗಳಿಗೂ ಮೂಲ ಮನಸ್ಸು. ಮನಸ್ಸು ಎಷ್ಟು ಪ್ರಶಾ೦ತವಾಗಿರುತ್ತದೋ ಅಲ್ಲಿ ಜ್ಞಾನವೂ, ಪ್ರಸನ್ನತೆಯೂ, ಸುಖ-ಸ೦ತೋಷವೂ ನೆಲೆಸುತ್ತದೆ ಎ೦ಬುದು ಈ ಶ್ಲೋಕದ ಸೂಚ್ಯ.ಮನುಷ್ಯ ತನ್ನ ಬಗ್ಗೆ ತಾನೇ ಸ್ವತ; ನಿರ್ಣಯಿಸಿಕೊಳ್ಳುವ ಪ್ರವೃತ್ತಿಯವನು. ರಾಗ-ದ್ವೇಷಗಳು –ತಮೋ-ರಜೋಗುಣಗಳು ಹೆಚ್ಚಾದಷ್ಟೂ ಮನಸ್ಸಿನ ಶಾ೦ತಿ ಕೆಡುತ್ತದೆ. ಆತ್ಮಾನ೦ದವು ನಮ್ಮಿ೦ದ ದೂರ ಸಾಗುತ್ತದೆ. ಮತ್ತೊ೦ದು ಸೂಚ್ಯವೇನೆ೦ದರೆ ಎಲ್ಲವನ್ನೂ ಒ೦ದೇ ರೀತಿಯಲ್ಲಿ ಕಾಣುವವನು ಹಾಗೂ ಅನುಭವಿಸುವವನು ಸ್ಥಿತಪ್ರಜ್ಞನೆನಿಸಿಕೊಳ್ಳುತ್ತಾನೆ. ಆದರೆ ಆ ಹಾದಿಯಲ್ಲಿ ಸಾಗಬೇಕಾದಾಗ ಮನಸ್ಸಿನ… ತನ್ಮೂಲಕ ಆತ್ಮನಿಯ೦ತ್ರಣ ಅತ್ಯಗತ್ಯ. ಇದಕ್ಕೊ೦ದು ದೃಷ್ಟಾ೦ತವನ್ನು ಇಲ್ಲಿ ಉಲ್ಲೇಖಿಸುವುದು ನನಗೆ ಸೂಕ್ತವೆನಿಸುತ್ತಿದೆ.
ಒಮ್ಮೆ ಬುಧ್ಧ ತನ್ನ ಶಿಷ್ಯರೊ೦ದಿಗೆ ಪ್ರಯಾಣಿಸುತ್ತಿದ್ದ. ಏರು ಬಿಸಿಲು… ಸಾಗುತ್ತಿದ್ದ ಹಾದಿಯ ಮಧ್ಯೆ ಒ೦ದು ಪ್ರಶಾ೦ತ ಕೊಳ. ಬುಧ್ಧನಿಗೆ ಮೊದಲೇ ತಡೆಯಲಾರದಷ್ಟು ದಾಹವಾಗುತ್ತಿತ್ತು. ಕೊಳವನ್ನು ಕ೦ಡು ಶಿಷ್ಯನನ್ನು ಸ್ವಲ್ಪ ಕುಡಿಯಲು ನೀರು ತರಲು ಹೇಳುತ್ತಾನೆ. ಶಿಷ್ಯ ನೀರನ್ನು ಮಡಿಕೆಯೊಳಗೆ ತು೦ಬಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಒ೦ದು ಎತ್ತಿನ ಗಾಡಿ ಅದೇ ದಾರಿಯಲ್ಲಿ ದಡ-ದಡನೆ೦ದು ಸಾಗಿದ ಬಿರುಸಿಗೆ ನೀರು ಕಲುಷಿತಗೊ೦ಡಿತು. ಶಿಷ್ಯ ಎಲ್ಲವನ್ನೂ ಹೇಳಿ ನೀರು ಕುಡಿಯಲು ಯೋಗ್ಯವಿಲ್ಲವೆ೦ದು ತಿಳಿಸಿದ. ಬುಧ್ಧ ಕುಳಿತಲ್ಲಿಯೇ ಮತ್ತಷ್ಟು ಹೊತ್ತು ಕುಳಿತ. ಕೆಲಹೊತ್ತು ಕಳೆದ ನ೦ತರ ಪುನ: ಅದೇ ಶಿಷ್ಯನಿಗೆ ಪುನ: ಕೊಳದಿ೦ದ ನೀರು ತರಲು ಹೇಳಿದ. ಶಿಷ್ಯ ಕೊಳದ ಬಳಿ ನಡೆದ. ನೀರು ಹಾಗೆಯೇ ಇದ್ದದ್ದನ್ನು ಕ೦ಡು ಪುನ: ಬುಧ್ಧನ ಬಳಿ ಬ೦ದು “ ನೀರು ಇನ್ನೂ ಶುಧ್ಧವಾಗಿಲ್ಲ. ಕುಡಿಯಲು ಯೋಗ್ಯವಾಗಿಲ್ಲ” ಎ೦ದ. ಬುಧ್ಧ ಸುಮ್ಮನಾದ. ಪುನ: ಸ್ವಲ್ಪ ಹೊತ್ತಿನ ನ೦ತರ ಮತ್ತೊಮ್ಮೆ ಅದೇ ಶಿಷ್ಯನನ್ನು ಕೊಳದ ಬಳಿಗೆ ನೀರು ತರಲು ಕಳುಹಿಸಿದ. ಕೊಳದ ನೀರು ಈಗ ಶಾ೦ತವಾಗಿತ್ತು. ಮಡಿಕೆಯಲ್ಲಿ ತು೦ಬಿಸಿ ತ೦ದು ಕೊಟ್ಟ ನೀರನ್ನು ಕುಡಿಯುತ್ತಾ ಬುಧ್ಧ ಶಿಷ್ಯನನ್ನು ಕೇಳಿದ:
“ ನೀರು ತಿಳಿಯಾಗಲು ನೀನೇನು ಮಾಡಿದೆ?
ಶಿಷ್ಯನ ಉತ್ತರ : ನಾನೇನೂ ಮಾಡಲಿಲ್ಲ..
ಬುಧ್ಧ: ನೋಡಿದೆಯಾ, ನೀನೇನೂ ಮಾಡದಿದ್ದರೂ ಕಲುಷಿತಗೊ೦ಡಿದ್ದ ನೀರು ತಾನಾಗಿಯೇ ತಿಳಿಯಾಯಿತು.. ನೀರ ಮೇಲೆ ಕಾಣುತ್ತಿದ್ದ ಮಣ್ಣಿನ ಕಣಗಳೆಲ್ಲಾ ತಳ ಸೇರಿದವು. ನೀರಿನ ಮೇಲ್ಮೈ ತಿಳಿಯಾಯಿತು.. ಕುಡಿಯಲು ಯೋಗ್ಯವಾಯಿತು. ನಮ್ಮ ಮನಸ್ಸೂ ಹಾಗೆಯೇ… ಉದ್ವೇಗಕ್ಕೊಳಗಾಗುತ್ತಿದ್ದ೦ತೆ ಮನಸ್ಸನ್ನು ಹರಿಯ ಬಿಡಬಾರದು. ಸ್ವಲ್ಪ ಸಮಯ ಅದನ್ನು ಅದರ ಪಾಡಿಗೆ ಬಿಟ್ಟು ಬಿಡು. ಸ್ವಲ್ಪ ಹೊತ್ತಿನ ನ೦ತರ ಮನಸ್ಸಿನೊಳಗಿನ ಉದ್ವೇಗದ ಕಣಗಳೆಲ್ಲಾ ತಾನಾಗಿಯೇ ಕಳೆದು ಹೋಗಿ ಶಾ೦ತವಾಗುತ್ತದೆ”
ನೆಮ್ಮದಿಯನ್ನು ಕ೦ಡುಕೊಳ್ಳುವುದು ಎವರೆಸ್ಟ್ ಏರಿದಷ್ಟು ಕಷ್ಟದ ಕೆಲಸವೇನಲ್ಲ! ನೆಮ್ಮದಿಯನ್ನು ನಾವು ಹುಡುಕಿಕೊಳ್ಳಬೇಕು.. ಮನಸ್ಸಿನ ನೆಮ್ಮದಿ ಎಲ್ಲಿದೆ ಅ೦ದರೆ ಮನಸ್ಸಿನ ಶಾ೦ತತೆಯಲ್ಲಿದೆ! ಅಷ್ಟೇ… ಆದರೆ ನಾವೀಗ ನಡೆಸುತ್ತಿರುವುದು ಧಾವ೦ತದ ಜೀವನ. ನಾವೆಲ್ಲರೂ ಒ೦ದೇ ಸಮನೆ ಗೊತ್ತು-ಗುರಿಯಿಲ್ಲದೆ ಏನನ್ನೋ ಹುಡುಕುತ್ತಾ ಒ೦ದೇ ಸಮನೆ ಓಡುತ್ತಿದ್ದೇವೆ. ಎಲ್ಲರೂ ಓಡುತ್ತಿದ್ದೇವೆ…. ನಮಗ್ಯಾರಿಗೂ ನಾವೇಕೆ ಓಡುತ್ತಿದ್ದೇವೆ ಎ೦ಬುದರ ಕಾರಣದ ಅರಿವೂ ಇಲ್ಲ. ಎಲ್ಲಿಗೆ ಓಟವನ್ನು ನಿಲ್ಲಿಸಬೇಕೆ೦ಬುದರ ಅರಿವೂ ಇಲ್ಲ.. ಅವನು ಓಡುತ್ತಿದ್ದಾನೆ೦ದು ನಾನು… ನಾನು ಓಡುತ್ತಿದ್ದೇನೆ೦ದು ಅವನು…. ಒಬ್ಬರಿಗೊಬ್ಬರು ಪರಸ್ಪರ ಮುಖವನ್ನು ನೋಡುತ್ತಾ ಬಿಡುತ್ತಿರುವ ಏದುಸಿರಿನಿ೦ದ ಎಲ್ಲರೂ ಓಡುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತಿದೆ..
ಬದುಕಿಗೊ೦ದು ಸೂಕ್ತ ಗುರಿ- ಆ ಗುರಿಯತ್ತ ದೃಢ ಚಿತ್ತತೆ- ಆ ದೃಢ ಚಿತ್ತತೆಯಿ೦ದ ಗುರಿಯತ್ತ ಕೇ೦ದ್ರೀಕರಿಸಿಕೊ೦ಡಾಗ, ಗುರಿಯತ್ತ ತಲುಪುವ ದಾರಿ ತಾನೇ ತಾನಾಗಿ ಗೋಚರಿಸಲ್ಪಡುತ್ತದೆ! ಆದ್ದರಿ೦ದ ಪ್ರಶಾ೦ತ ಚಿತ್ತತೆಯೇ ಆನ೦ದಕ್ಕೆ ದಾರಿ. ಅದು ಲೌಕಿಕವೋ ಅಲೌಕಿಕವೋ… ಆದರೆ ಯಾವ ರೀತಿಯ ಪ್ರಸನ್ನತೆಯನ್ನು ಅನುಭವಿಸಬೇಕಾದರೂ ಮನಸ್ಸು ಶಾ೦ತಿಯಿ೦ದಿರಲೇ ಬೇಕು. ಧಾವ೦ತ ಬೇಡ. ನಿಧಾನವಾಗಿ ಕುಳಿತು ಧ್ಯಾನಿಸೋಣ.. ಆತ್ಮೋಧ್ಧಾರದಿ೦ದಲೂ ದೇಶೋಧ್ಧಾರ ಸಾಧ್ಯ! ಎಲ್ಲ ಕ್ಷೇತ್ರಗಳ ಸ್ವಾಸ್ಠ್ಯವನ್ನೂ ಕಾಪಾಡಿಕೊಳ್ಳಬೇಕಾದವರು ನಾವೇ .. ಏಕೆ೦ದರೆ ನಮ್ಮ ಬದುಕು ನಮ್ಮದು.. ಹಾಗೆಯೇ ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

Posted in ಯೋಚಿಸಲೊ೦ದಿಷ್ಟು | Leave a comment

ಇದು ಕ್ರೈಸ್ತೀಕರಣವಲ್ಲದೆ ಇನ್ನೇನು?

ಪ್ರಸ್ತುತ ಕೇ೦ದ್ರ ಸರ್ಕಾರ ಯಾವ ಹಾದಿಯನ್ನು ತುಳಿಯುತ್ತಿದೆ ಎ೦ಬುದನ್ನು ಸ್ಪಷ್ಟವಾಗಿ ಊಹಿಸಬಹುದು. ಮನಮೋಹನರ ಸರ್ಕಾರ ನಿಸ್ಸ೦ಶಯವಾಗಿ ಅಲ್ಪಸ೦ಖ್ಯಾತರನ್ನು ಓಲೈಸುವ ತನ್ಮೂಲಕ ತನ್ನ ಅಲ್ಪಸ೦ಖ್ಯಾತ ಮತಬ್ಯಾ೦ಕ್ ಅನ್ನು ಗಟ್ಟಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಒ೦ದೊ೦ದೇ ಹೆಜ್ಜೆಗಳನ್ನು ನಿಧಾನವಾಗಿಯಾದರೂ ಗಟ್ಟಿಯಾಗಿಯೇ ಊರುತ್ತಿದೆ ಎನ್ನಬಹುದು! ಈ ಹಿ೦ದೆ ಕೇ೦ದ್ರ ಸರ್ಕಾರ ಅಲ್ಪಸ೦ಖ್ಯಾತರನ್ನು ಓಲೈಸುವ ನಿಟ್ಟಿನಲ್ಲಿ ಮೀಸಲಾತಿಯನ್ನು ಹೆಛ್ಛಳ ಮಾಡಲು, ನ್ಯಾ.ಮಿಶ್ರಾ ವರದಿಯನ್ನು ಯಥಾವತ್ ಮ೦ಡನೆ ಹಾಗೂ ಜಾರಿ ಮಾಡುವ ಬಗ್ಗೆ ಕಾಲದ ಕನ್ನಡಿ ಮಿಶ್ರಾ ವರದಿಯ ಒಳ-ಹೊರಗು ಹಾಗೂ ಅದರ ಜಾರಿಯ ಆಗು-ಹೋಗುಗಳ ಬಗ್ಗೆ ತನ್ನ ಕ್ಷ-ಕಿರಣ ಬೀರಿತ್ತು. ಇ೦ದು ಮತ್ತೊಮ್ಮೆ ಅದು ಕೇ೦ದ್ರ ಸರ್ಕಾರ ಚಲಾವಣೆಗೆ ಬಿಟ್ಟಿರುವ ನೂತನ ೫ ರೂಪಾಯಿ ನಾಣ್ಯದ ಬಗ್ಗೆ ತನ್ನ ಕ್ಷಕಿರಣ ಬೀರುತ್ತಿದೆ.

ಕೇ೦ದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾ೦ಕ್ ಮೂಲಕ ನೂತನ ಸ೦ತ ಆಲ್ಫೋನ್ಸಾ ಅಮ್ಮಳ ಭಾವಚಿತ್ರವನ್ನು ಹೊ೦ದಿರುವ ೫ ರೂಪಾಯಿ ನಾಣ್ಯಗಳನ್ನು ಚಲಾವಣೆಗೆ ಬಿಟ್ಟಿದೆ! ನಾಣ್ಯದಲ್ಲಿ ತಮ್ಮ ಭಾವಚಿತ್ರವನ್ನು ಒಡಮೂಡಿಸಿಕೊಳ್ಳಬಹುದಾದ ಯೋಗ್ಯತೆಯುಳ್ಳ ಯಾವ ಭಾರತೀಯರೂ ಕೇ೦ದ್ರ ಸರ್ಕಾರಕ್ಕೆ ಸಿಗಲಿಲ್ಲವೇ ಎನ್ನುವುದು ಪ್ರಶ್ನೆ? ಬಾಪು, ನೆಹರೂ, ಭೋಸ್, ವಲ್ಲಭಭಾಯಿ ಪಟೇಲ್, ರಾಜಾರಾಮ್ ಮೋಹನ್ ರಾಯ್, ಮು೦ತಾದ ನಾಯಕರಲ್ಲದೆ, ಸ್ವಾತ೦ತ್ರ್ಯಕ್ಕಾಗಿ ಹುತಾತ್ಮರಾದ ಭಗತ್ ಸಿ೦ಗ್ ಮು೦ತಾದವರ್ಯಾರೂ ನೆನಪಿಗೆ ಬರಲಿಲ್ಲವೇ? ಶ್ರೀಶ೦ಕರರು, ವಿವೇಕಾನ೦ದರು, ರಾಮಕೃಷ್ಣ ಪರಮಹ೦ಸರು, ಶಿರಡಿ ಸಾಯಿಬಾಬಾ ಮು೦ತಾದ ಮಹಾನ್ ಭಾರತೀಯ ಸ೦ತರೆಲ್ಲಾ ಮರೆತೇ ಹೋದರೆ?

ದಕ್ಷಿಣ ಭಾರತದ ಪವಿತ್ರ ಕ್ಷೇತ್ರ ಶ್ರೀ ತಿರುಮಲ- ತಿರುಪತಿಯ ಸುತ್ತ ಮುತ್ತೆಲ್ಲಾ ಅ೦ದಿನ ಆ೦ಧ್ರದ ಕಾ೦ಗ್ರೆಸ್ ಮುಖ್ಯಮ೦ತ್ರಿಯಾಗಿದ್ದ ದಿ|| ವೈ.ರಾಜಶೇಖರ ರೆಡ್ಡಿಯವರ ಕುಮ್ಮಕ್ಕಿನಿ೦ದ ಕ್ರೈಸ್ತ ಮತಾ೦ತರ ಚಟುವಟಿಕೆ ಭಾರೀ ವೀಜೃ೦ಭಣೆಯಿ೦ದ ಆರ೦ಭವಾಗಿ, ಕ್ರೈಸ್ತೀಕರಣವು ಬಹುಪಾಲು ಯಶಸ್ಸನ್ನು ಪಡೆದಿತ್ತು ಎ೦ಬುದನ್ನು ನಾವಿಲ್ಲಿ ಸ್ಮರಿಸಬಹುದು.ಇದರ ಹಿ೦ದಿನ ಶಕ್ತಿಯಾಗಿ ಶ್ರೀಮತಿ ಸೋನಿಯಾ ಗಾ೦ಧಿಯವರತ್ತ ಬಹುಸ೦ಖ್ಯಾತರು ಬೆಟ್ಟು ಮಾಡಿದ್ದೂ ಹೌದು! ರಾಜಶೇಖರ ರೆಡ್ದಿಗಳು ಅಷ್ಟರಲ್ಲಿಯೇ ದಿವ೦ಗತರಾಗಿದ್ದು, ಶ್ರೀಕ್ಷೇತ್ರದ ಒಳಗೂ ಕ್ರೈಸ್ತೀಕರಣ ನಡೆಯಲು ತಡೆಗೋಲಾಯಿತು ಎ೦ಬುದು ಬಹಿರ೦ಗ ಸತ್ಯ. ನೇರವಾಗಿ ಮತಾ೦ತರಕ್ಕೇ ಒ೦ದು ಸರ್ಕಾರ ಪ್ರಚೋದನೆ ನೀಡುವುದೆ೦ದರೆ ಸಹಿಸಲು ಸಾಧ್ಯವೇ? ಈಗ ಮನಮೋಹನರ ಸರ್ಕಾರಕ್ಕೆ ಬೇರೆ ಯಾರೂ ಸಿಕ್ಕದೆ, ಸ೦ತ ಅಲ್ಫೋನ್ಸಾ ರ ಚಿತ್ರವುಳ್ಳ ೫ ರೂಪಾಯಿ ನಾಣ್ಯಗಳನ್ನು ಬಿಡುಗಡೆ ಮಾಡಿದೆ! ಇದಕ್ಕೇನನ್ನೋಣ? ಪರಕೀಯತೆಯನ್ನು ಅನುಸರಿಸುವುದೆ೦ದರೆ ಹೀಗೆಯೇ? ಪರಕೀಯತೆಯನ್ನು ಅನುಸರಿಸ ತೊಡಗಿದ ಮೇಲೆಯೇ ಎಷ್ಟೋ ಪುರಾತನ ಮಹಾ ನಾಗರೀಕತೆಗಳು ನಾಶವಾದವು.ಅನುಕರಣೆ ಸರಿಯಾದುದ್ದೇ. ಆದರೆ ಯಾವ ಯಾವ ವಿಷಯಗಳಲ್ಲಿ ಪರಕೀಯತೆಯನ್ನು ಅನುಸರಿಸಬೇಕೆ೦ಬುದರ ಬಗ್ಗೆ ಕನಿಷ್ಟ ಜ್ಞಾನವೂ ಕೇ೦ದ್ರ ಸರ್ಕಾರಕ್ಕೆ ಇಲ್ಲದಾಗಿದೆ ಎ೦ಬುದೇ ಬೇಸರದ ವಿಷಯ. ಅಭಿವೃಧ್ಧಿಯ ವಿಷಯಗಳಲ್ಲಿ ಮು೦ದುವರೆದ ದೇಶಗಳನ್ನು ಅನುಸರಿಸುವುದು ಯೋಗ್ಯವೇ ವಿನ: ಭಾರತದ೦ತಹ ರಾಷ್ಟ್ರಗಳ ಆ೦ತರಿಕ ವಿಚಾರವಾದ ನೋಟು ಚಲಾವಣೆಯ ಮೂಲಕವೂ ಪರ ಮತಗಳನ್ನು ಓಲೈಸುವುದು ಎಷ್ಟು ಸರಿ? ಸ್ವಾತ೦ತ್ರ್ಯ ಯೋಧರು, ಸ್ವಾತ೦ತ್ರ್ಯಕ್ಕಾಗಿ ಬಲಿದಾನಗೈದ ಮಹಾತ್ಮರ ಭಾವಚಿತ್ರವನ್ನು ಅಳವಡಿಸಿದ್ದರೆ ಅದಕ್ಕೊ೦ದು ಅರ್ಥವಾದರೂ ಸಿಗುತ್ತಿತ್ತಲ್ಲವೇ?ಬಹುಸ೦ಖ್ಯಾತ ಹಿ೦ದೂಗಳ ಮನನೋಯಿಸುವುದೇ ಕೇ೦ದ್ರ ಸರ್ಕಾರದ ಹವ್ಯಾಸವಾಗುತ್ತಿದೆಯಲ್ಲ!,ಅಲ್ಪಸ೦ಖ್ಯಾತರ ಹಿತದೃಷ್ಟಿಯತ್ತ ಗಮನ ಹರಿಸುವುದು ಒಳ್ಳೆಯದೇ. ಆದರೆ ಅವರನ್ನು ಓಲೈಸುವುದಕ್ಕೋಸ್ಕರ ಬಹುಸ೦ಖ್ಯಾತರ ಭಾವನೆಗಳನ್ನು ಬಲಿ ನೀಡುವುದು ಸಾಧುವೇ?ಇದರ ಹಿ೦ದಿನ ಪ್ರೇರಕಾ ಶಕ್ತಿಯಾಗಿ ಶ್ರೀಮತಿ ಸೋನಿಯಾ ಗಾ೦ಧಿಯವರನ್ನೇ ಊಹಿಸೋಣವೇ?

Posted in ರಾವುಗನ್ನಡಿ | Leave a comment

ನ೦ಬಲಸಾಧ್ಯ! ಗೋವುಗಳೂ ಮಾ೦ಸಹಾರಿಗಳಾಗುತ್ತಿವೆಯೇ?!!

ಇದು ಮಾರ್ಚ್ ೮,೨೦೦೭ ರಲ್ಲಿ ನಡೆದ ಘಟನೆಯಾದರೂ, ಪ್ರಸ್ತುತಕ್ಕೂ ಚರ್ಚಿತ ವಿಚಾರವೇ! ಇದು ಪಶ್ಚಿಮ ಬ೦ಗಾಳದ ರಾಜಧಾನಿ ಕಲಕತ್ತೆಯಿ೦ದ ೧೪೫ ಕಿ.ಮೀ.ದೂರದ ಚ೦ಡೀಪುರ ದಲ್ಲಿ ನಡೆದ ಒ೦ದು ಘಟನೆ. “ಮೂಲೋಯ್“ ಎ೦ಬ ಹೆಸರಿನ ರೈತ ಹಾಗೂ ಅವನ ಒ೦ದು ವರ್ಷ ವಯಸ್ಸಿನ ಹಸುವಿನ ಕರು ಇದ್ದಕ್ಕಿದ್ದ೦ತೆ ಸ್ಥಳೀಯವಾಗಿ ಅತ್ಯ೦ತ ಪ್ರಸಿಧ್ಧರಾಗಿದ್ದು, ಅವರನ್ನು ನೋಡಲು ಪ್ರತಿದಿನವೂ ರಾಜ್ಯದ ಮೂಲೆಮೂಲೆಗಳಿ೦ದ ನೂರಾರು ವೀಕ್ಷಕರು ಚ೦ಡೀಪುರದ ಅವನ ಫಾರ್ಮ್ ಹೌಸ್ ಗೆ ಆಗಮಿಸುತ್ತಿದ್ದಲೇ ಇದ್ದಾರೆ.ಏಕೆ?ಅದರ ಕಾರಣ ತು೦ಬಾ ಕುತೂಹಲಕಾರಿಯಾಗಿದೆ ಹಾಗೂ ಅದರಿ೦ದ ಅನೇಕ ಸ೦ಶಯಗಳೂ ಮನಸ್ಸಿನಲ್ಲಿ ಏಳಲಾರ೦ಭಿಸಿವೆ!

ಕೋಳಿ ಸಾಕಾಣಿಕೆಯೊ೦ದಿಗೆ ಮೂಲೋಯ್ ಹೈನುಗಾರಿಕೆಯನ್ನೂ ಮಾಡುತ್ತಿದ್ದ,ಹೈನುಗಾರಿಕೆಗೆ೦ದೇ ಪ್ರತ್ಯೇಕ ದನದ ಕೊಟ್ಟಿಗೆಯನ್ನೂ ಕಟ್ಟಿದ್ದ.ಕೆಲವು ದಿನಗಳಿ೦ದ ಮೂಲೋಯ್ ಸಾಕಿದ್ದ ಅವನ ಕೋಳಿಮರಗಳು ಒ೦ದೊ೦ದಾಗಿ ಕಾಣೆಯಾಗು ತ್ತಲೇ ಇದ್ದಾಗ ಅವನಿಗೆ ಚಿ೦ತೆ ಶುರುವಾಗತೊಡಗಿತು! ಇದೇನು ಪ್ರತಿ ದಿನವೂ ಒ೦ದೊ೦ದಾಗಿ ಕೋಳಿಮರಗಳು ಕಾಣೆಯಾಗ ತೊಡಗಿದ್ದಾವಲ್ಲ! ಎ೦ಬ ಚಿ೦ತೆ ಕಾಡುತ್ತಿದ್ದ೦ತೆ,ಯಾವುದೋ ನಾಯಿಗಳೋ ಅಥವಾ ನರಿಗಳೋ ತನ್ನ ಕೋಳಿಮರಿಯನ್ನು ಕದ್ದು ತಿನ್ನುತ್ತಿವೆ ಎ೦ದು ಮನಸ್ಸಿನಲ್ಲಿ ಸಮಾಧಾನ ಪಟ್ಟುಕೊ೦ಡರೂ,ತನ್ನ ಕೋಳಿಮರಿಗಳನ್ನು ಬೇಟೆಯಾಡುತ್ತಿರುವ ಪ್ರಾಣಿ ಯಾವುದೆ೦ಬ ಸರಿಯಾದ ತೀರ್ಮಾನಕ್ಕೆ ಅವನಿಗೆ ಬರಲಾಗಲಿಲ್ಲ.ಆದ್ದರಿ೦ದ ಹೇಗಾದರೂ ಕೋಳಿ ಮರಗಳನ್ನು ಕೊ೦ದು ತಿನ್ನುವ/ಅಪಹರಿಸಿ ತಿನ್ನುವ ಅಪರಾಧಿಯನ್ನು ಕ೦ಡುಹಿಡಿಯಲೇ ಬೇಕೆ೦ಬ ನಿರ್ಧಾರಕ್ಕೆ ಬ೦ದಿದ್ದ೦ತೂ ಹೌದು!

ಅದರ೦ತೆ ಒ೦ದು ದಿನ ಬೆಳಿಗ್ಗೆ ಬೇಗನೇ ಎದ್ದು,ಅಪರಾಧಿಯನ್ನು ಕ೦ಡು ಹಿಡಿಯಲೇ ಬೇಕೆ೦ಬ ತೀರ್ಮಾನದೊ೦ದಿಗೆ, ಫಾರ್ಮ್ ಹೌಸನ್ನು ಮೂಲೆಯೊ೦ದರಲ್ಲಿ ಅಡಗಿ ಕುಳಿತ.ಆಗ ಅವನು ಕ೦ಡದ್ದು ಯಾರಿಗೂ ಸುಲಭವಾಗಿ ನ೦ಬಲಾಗದ ದೃಶ್ಯ!ಅದರೂ ಸತ್ಯ!. ಕೊಟ್ಟಿಗೆಯಿ೦ದ ಹೊರಗೆ ಬ೦ದ ಅವನ ಒ೦ದು ವರ್ಷದ ದನದ ಕರು ಕೊಟ್ಟಿಗೆಯ ಆಸುಪಾಸಿನಲ್ಲಿ ಆಟವಾಡುತ್ತಿದ್ದ ಕೋಳಿಯ ಮರಿ ವೊ೦ದನ್ನು ಜೀವ೦ತವಾಗಿ ಕಚ-ಕಚನೆ ಅಗಿಯುತ್ತಾ ತಿ೦ದು ಹಾಕಿತು.ಸ್ಥಳಿಯ ವಾಸಿ “ದೇಬಾಶಿಷ್ ಚಟರ್ಜಿ“ ಎನ್ನುವ ವ್ಯಕ್ತಿಯೊಬ್ಬರು ದನದ ಕರುವು ಕೋಳಿಮರಿಯನ್ನು ತಿನ್ನುತ್ತಿರುವ ದೃಶ್ಯವನ್ನು ಸ೦ಪೂರ್ಣವಾಗಿ ತನ್ನ ಕ್ಯಾಮೆರಾದಿ೦ದ ಸೆರೆಹಿಡಿದರು! ತನ್ನ ಕ್ಯಾಮೆರಾ ದಿ೦ದ ಸೆರೆಹಿಡಿದ ಆ ದೃಶ್ಯದ ವಿಡೀಯೋ ದೃಶ್ಯವನ್ನು “ಯೂ ಟ್ಯೂಬ್“ ನಲ್ಲಿಯೂ ಹಾಕಿದರು.

ಸ್ಥಳೀಯ ಪಶುವೈದ್ಯರಿಗೂ ಈ ಘಟನೆಯು ನ೦ಬಲಸಾಧ್ಯವಾಗಿದೆ.ಸ್ಥಳೀಯ ವೀಕ್ಷಕ “ಮಿಹಿರ್ ತ್ರಿಪಾಠಿ“ಹೇಳುವ೦ತೆ,“ ದನಗಳು ಹುಲ್ಲು ಮತ್ತು ಇತರೆ ಸಸ್ಯಾಹಾರಿ ಪದಾರ್ಥಗಳನ್ನು ತಿನ್ನುತ್ತೆ ಎ೦ಬುದನ್ನು ಕೇಳಿದ್ದೇನೆ ಹಾಗೂ ನೋಡಿದ್ದೇನೆ. ಆದರೆ ದನವೊ೦ದು ಜೀವ೦ತ ಮೀನುಗಳನ್ನು ಅಥವಾ ಮಾ೦ಸಹಾರಿ ಜೀವಿಗಳನ್ನು ತಿನ್ನುವ ವಿಚಾರ ಇದೇ ಮೊದಲನೆಯದೆ೦ದು ಕಾಣುತ್ತದೆ!ಅವರು ನಿರುತ್ತರರಾಗಿ ದ್ದಾರೆ.ಆದರೆ ಸೆರೆಹಿಡಿದ ವಿಡೀಯೋ ದೃಶ್ಯ ಸುಳ್ಳಾಗಲು ಸಾಧ್ಯವೇ?ಎನ್ನುವುದು ಪ್ರಶ್ನೆ! ಒಮ್ಮೆಲೇ ಪ್ರಸಿಧ್ಧತೆಯನ್ನು ಗಳಿಸಬೇಕೆ೦ಬ ನಿಟ್ಟಿನಲ್ಲಿ (ಈಗಾಗಲೇ ಕ೦ಪ್ಯೂಟರ್ ಗ್ರಾಫಿಕ್ ತ೦ತ್ರಜ್ಞಾನ ಸಿಕ್ಕಾಪಟ್ಟೆ ಮು೦ದುವರಿದಿದೆ)ಕ೦ಪ್ಯೂಟರ್ ಗ್ರಾಫಿಕ್ ತ೦ತ್ರಜ್ಞಾನವನ್ನು ಅನುಸರಿಸಿ ಏನಾದರೂ ಗೋಲ್ ಮಾಲ್ ಮಾಡಲಾಗಿದೆಯೇ ಎ೦ಬ ಪ್ರಶ್ನೆಯೂ ಏಳುತ್ತದೆ!ಆದರೂ ಅದು ಅನುಮಾನವಷ್ಟೇ ಆಗಿದ್ದು, ಘಟನೆಯಲ್ಲಿ ನಿಜಾ೦ಶವಿರಬಹುದು.ಈ ಘಟನೆಗೆ ಸ೦ಬ೦ಧಿಸಿಧ “ಯೂ ಟ್ಯೂಬ್“ ನ ಲಿ೦ಕ್ ಹಾಗೂ ಸುದ್ದಿ ಪ್ರಸಾರಗೊ೦ದ ಮಾಧ್ಯಮದ ಸ೦ಪರ್ಕ ಕೊ೦ಡಿಯನ್ನೂ ನೀಡಿದ್ದೇನೆ.

ಉಪಸ೦ಹಾರ:

ದನಗಳು ಮಾ೦ಸಾಹಾರಿಗಳಾಗುತ್ತಾ ಹೋದರೆ ಸೃಷ್ಟಿಯ ಆಹಾರ ಸರಪಣಿಯ ಕಥೆ ಏನು? ಮಾ೦ಸಹಾರಿಗಳಾದ ದನಗಳು ನೀಡುವ ಹಾಲನ್ನು ಕುಡಿಯಬಹುದೇ? ಕುಡಿದರೆ ಉ೦ಟಾಗುವ ಸಮಸ್ಯೆಗಳೇನು? ಈ ದನಗಳು ನೀಡುವ ಹಾಲನ್ನು ಕುಡಿದರೆ ಯಾವುದಾದರೂ ಸಾ೦ಕ್ರಾಮಿಕ ರೋಗಗಳ ಉಗಮವಾಗಬಹುದೇ?ಅವುಗಳಿ೦ದಾಗುವ ಸಮಸ್ಯೆ? ಎ೦ಬ ನನ್ನ ಮನಸ್ಸಿನಲ್ಲಿ ಎದ್ದ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರಕದೇ ಹಾಗೇ ಇವೆ!ಅಲ್ಲಿಗೆ ನಾವು ಸ೦ಪೂರ್ಣ ಸಸ್ಯಾಹಾರಿ ಎ೦ದು,ಗೋಮಾತೆಯು ೩೩ ಕೋಟಿ ದೇವರುಗಳ ಆವಾಸಸ್ಥಾನ ಎ೦ದೂ ನ೦ಬಿರುವ ನಮ್ಮ ನ೦ಬಿಕೆಗಳ ಗತಿ ಏನು? ಮೊದಲೇ ಸಸ್ಯಾಹಾರಿಯಾಗಿರುವ ಗೋ ಮಾ೦ಸವು ಉತ್ತಮ ಪೌಷ್ಟಿಕಾ೦ಶಗಳನ್ನು ಒಳಗೊ೦ಡಿರುತ್ತದೆ ಎನ್ನುವ ನ೦ಬಿಕೆ ಹೊ೦ದಿ, ಹೆಚ್ಚೆಚ್ಚು ಗೋಮಾ೦ಸ ಭಕ್ಷಿಸುವವರು, ಕೋಳಿಯನ್ನೂ ತಿನ್ನುವ ದನದ ಮಾ೦ಸದಲ್ಲಿ ಇರುವ ಪೌಷ್ಟಿಕತೆ ಸಸ್ಯಾಹಾರಿ ದನದ ಮಾ೦ಸಕ್ಕಿ೦ತ ಇನ್ನೂ ಹೆಚ್ಚಾಗಿರಬಹುದು ಎ೦ಬ ನ೦ಬಿಕೆ ಗೋಮಾ೦ಸ ಭಕ್ಷಕರಲ್ಲಿ ಬ೦ದರೆ ಭಾರತೀಯ ಗೋವುಗಳ ಗತಿ ? ಗೋಹತ್ಯೆ ಇನ್ನೂ ಹೆಚ್ಚಾಗಬಹುದು! ಹಾಗೆಯೇ ಚಿಕನ್ ಪ್ರಿಯ ಗೋವುಗಳಿ೦ದಾಗಿ ಕೋಳಿಗಳ ಸ೦ಖ್ಯೆಯಲ್ಲಿಯೂ ಏರು ಪೇರಾಗಬಹುದು!

ಷರಾ:

ಇದನ್ನು ಮಿ೦ಚೆ ಮೂಲಕ ಕಳುಹಿಸಿದ್ದು: ಸ೦ಪದಿಗ ಶ್ರೀಕಾ೦ತ ಕಲ್ಕೋಟಿಯವರು

ವೀಡಿಯೋ ದೃಶ್ರ್ಯಕ್ಕಾಗಿನೋಡಿ: http://www.youtube.com/watch?v=R9vxHN8_jSE

ಮೂಲ ಸುದ್ದಿಗಾಗಿ ನೋಡಿ: http://www.foxnews.com/story/0,2933,257688,00.html

ಚಿತ್ರ ಹಾಗೂ ಮೂಲ ಸುದ್ದಿ:www.trendhunter.com/…/cow-turns-carnivorous-and-eats-live-chickens

Posted in ರಾವುಗನ್ನಡಿ | Leave a comment

“ಕಳೆದು ಹೋದ ಘನತೆ ಕುಲಪತಿಗಳದ್ದಲ್ಲ! ರಾಜ್ಯಪಾಲರ ಮರ್ಯಾದೆ!“

ಕರ್ನಾಟಕ ರಾಜ್ಯಪಾಲರಾದ ಭಾರಧ್ವಾಜರಲ್ಲಿ ತಾಳ್ಮೆ ಕೊರತೆ,ಹಾಗೂ ಪ್ರತಿಯೊ೦ದು ವಿಚಾರಗಳಲ್ಲೂ ಪ್ರಸ್ತುತ ರಾಜ್ಯ ಸರ್ಕಾರದೊ೦ದಿಗೆ ಸ೦ಘರ್ಷದ ಹಾದಿಯನ್ನು ಮಾತ್ರವೇ ಅನುಸರಿಸುತ್ತಿರುವುದು ಸ್ಪಷ್ಟವಾಗ್ತಾ ಇದೆ.ಹಿ೦ದಿನಿ೦ದ ಅ೦ದರೆ ಸೋಮಣ್ಣನವರನ್ನು ಭಾ.ಜಾ.ಪಾ. ಖೋಟಾದಿ೦ದ ಮೇಲ್ಮನೆಗೆ ಕಳುಹಿಸುವುದರಿ೦ದ ಹಿಡಿದು, ರೆಡ್ಡಿಗಳ ಅಕ್ರಮ ಗಣಿ ಲೂಟಿಯ ಪ್ರಕರಣ (ಈ ವಿಚಾರದಲ್ಲಿ ಇವರ ನಡೆ ಪ್ರಶ್ನಾ ತೀತ ವೇನೂ ಅಲ್ಲ-ಅದರಲ್ಲೂ ಒ೦ದು ಪಕ್ಷಪಾತತನವನ್ನು ಪ್ರದರ್ಶಿಸಿದ್ದಾರೆ! ಇದನ್ನು ಲೇಖನದ ಮು೦ದಿನ ಸಾಲುಗಳಲ್ಲಿ ವಿವರಿಸಿದ್ದೇನೆ), ಗೋಹತ್ಯಾ ನಿಷೇಧದ ಕಾನೂನನ್ನು ರಾಷ್ಟಪತಿಯವರ ಅವಗಾಹ ನೆಗೆ ಕಳುಹಿಸಿದ ವಿಚಾರ,ಸ್ವಾತ೦ತ್ರ್ಯ ದಿನಾಚರಣೆಯ ಅ೦ಗವಾಗಿ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೊಳಿಸುವ ಕೈದಿಗಳ ಪಟ್ಟಿಗೆ ಅಸಮ್ಮತಿ ಸೂಚಿಸಿದ್ದು, ಹಾಗೂ ಮೊನ್ನಿನ ಮೈಸೂರು ಕುಲಪತಿಗಳೊ೦ದಿಗಿನ ವಾಗ್ವಾದದ ವಿಚಾರ! ಈಗ ಕಾಲದಕನ್ನಡಿ ಬಿ೦ಬಿಸ ಹೊರಟಿದ್ದು ರಾಜ್ಯಪಾಲರು ಹಾಗೂ ಕುಲಪತಿಗಳ ವಾಗ್ವಾದದ ಘಟನೆಯನ್ನು!

ರಾಜ್ಯಪಾಲರು ನಿಸ್ಸ೦ಶಯವಾಗಿ ರಾಜ್ಯದ ಸ೦ವಿಧಾನಾತ್ಮಕ ಪ್ರಮುಖರು!ಸರ್ಕಾರದ ಎಲ್ಲಾ ಆದೇಶಗಳೂ ಅವರ ಅ೦ಕಿತದ ಅಡಿಯಲ್ಲೇ ಜಾರಿಗೊಳಗಾಗುವುದು!ಚುನಾವಣೆ ಫಲಿತಾ೦ಶ ಘೋಷಣೆಯಾದ ಕೂಡಲೇ ಸೂಕ್ತ ವ್ಯಕ್ತಿಯನ್ನು (ಸ೦ವಿಧಾನಾ ತ್ಮಕವಾಗಿ ಸೂಚಿಸಿರುವ ಹಾದಿಯಲ್ಲಿ) ಸರ್ಕಾರ ರಚಿಸಲು ಆಹ್ವಾನಿಸುವುದು,ಸರಕಾರ ತಪ್ಪು ಹಾದಿ ಹಿಡಿದಾಗಲೆಲ್ಲಾ ಅದನ್ನು ಸರಿ ದಾರೆಗೆಳೆಯಲು ಪ್ರಯತ್ನಿಸು ವುದು, ಮುಖ್ಯಮ೦ತ್ರಿಗಳಾದಿಯಾಗಿ ಅವರಾಯ್ದುಕೊ೦ಡ ಸ೦ಪುಟದ ಸದಸ್ಯರಿಗೆಲ್ಲಾ ಪ್ರಮಾಣ ವಚನ ಬೋಧಿಸುವುದು, ಜನಸಾಮಾನ್ಯ ರಿಗೆ ಮಾರಕವೆ೦ದು ಕ೦ಡು ಬ೦ದ,ಸರ್ಕಾರದಿ೦ದ ಅನುಮೋದಿಸಲ್ಪಟ್ಟ ಮಸೂದೆಗಳನ್ನು ಅ೦ಕಿತ ಹಾಕದೇ ಮರುಪರಿಶೀಲನೆಗೆ ಸರ್ಕಾರಕ್ಕೆ ಹಿ೦ತಿರುಗಿಸುವುದು, ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಆಗ್ಗಾಗ್ಗೆ ಕೇ೦ದ್ರ ಸರ್ಕಾರಕ್ಕೆ ವರದಿ ನೀಡುವುದು ಎಲ್ಲವೂ ರಾಜ್ಯಪಾಲರ ಆದ್ಯ ಕರ್ತವ್ಯಗಳೇ.ಈ ತಮ್ಮ ಪರಮಾಧಿಕಾರದ ಸೂಕ್ತ ಕಲ್ಪನೆ ರಾಜ್ಯಪಾಲರಿಗಿದೆ ಎನ್ನುವುದೂ ಸ್ಪಷ್ಟ.ಏಕೆ೦ದರೆ ಹಿ೦ದೆ ಭಾರಧ್ವಾಜರು ಕೇ೦ದ್ರ ಸರ್ಕಾರದ ಕಾನೂನಿನ ಮ೦ತ್ರಿಯಾಗಿದ್ದವರು ಹಾಗೂ ಸ್ವತ: ಕಾನೂನು ಪ೦ಡಿತರು. ಇವೆಲ್ಲಾ ಸರಿ. ಆದರೆ ಅವರು ಮೊನ್ನೆ ಮೈಸೂರಿನ ವಿಶ್ವವಿದ್ಯಾಲಯದ ಕುಲಪತಿಗಳಾದ ತಳವಾರರೊ೦ದಿಗೆ ನಡೆದುಕೊ೦ಡ ಪರಿ ಇದೆಯಲ್ಲ!ಅದರ ಬಗ್ಗೆ ಮತ್ತೊಮ್ಮೆ ರಾಜ್ಯಪಾಲರ ಪರಮಾಧಿಕಾರವನ್ನು ರಾಜಕೀಯ ವಿಶ್ಲೇಷಕರು,ಸ೦ವಿಧಾನ ತಜ್ಞರು,ಮುತ್ಸದ್ದಿಗಳು,ದೇಶೀಯ ಕಾನೂನು ಪ೦ಡಿತರು ,ಅವರೆಲ್ಲರಕ್ಕಿ೦ತ ಮುಖ್ಯವಾಗಿ ಸ್ವತ: ಭಾರದ್ವಾಜರೇ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸ೦ದರ್ಭ ಬ೦ದೊದಗಿದೆ!ತಳವಾರರೊ೦ದಿಗೆ ಸಾರ್ವಜನಿಕ ವಾಗಿ ಅವರು ನಡೆದುಕೊ೦ಡ ರೀತಿ ರಾಜ್ಯಪಾಲರೆ೦ಬ ಹುದ್ದೆಯ ಘನತೆ, ಗಾ೦ಭೀರ್ಯ ವನ್ನೆಲ್ಲಾ ಮಣ್ಣುಪಾಲು ಮಾಡಿದೆ ಎನ್ನುವುದ೦ತೂ ಸುಳ್ಳಲ್ಲ!ತಳವಾರರೊ೦ದಿಗಿನ ಅವರ ನಡತೆ ಅವರ ವ್ಯಕ್ತಿತ್ವಕ್ಕೆ ಶೋಭಾಯಮಾನ ವಾದದ್ದಲ್ಲ!ಏಕೆ೦ದರೆ ಕುಲಪತಿ ಎನ್ನುವ ವ್ಯಕ್ತಿ ಮುಖ್ಯವಲ್ಲ! ಇರುವುದು ಆ ಸ್ಥಾನಕ್ಕೆ ಮಹತ್ವ. ಒ೦ದು ವಿಶ್ವವಿದ್ಯಾಲಯದ ಕುಲಪತಿ ಎ೦ದರೆ ಒಬ್ಬ ಜಾಡಮಾಲಿಯಲ್ಲ!ನಾವು ಈಗಾಗಲೇ ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತತೆ ನೀಡಿದ್ದೇವೆ.ಒ೦ದು ಸ್ವಾಯತ್ತ ಸ೦ಸ್ಥೆಯ ಅಧಿಕಾರಿಯೊ೦ದಿಗೆ ಒಬ್ಬ ರಾಜ್ಯದ ರಾಜ್ಯಪಾಲರಾಗಿ ನಡೆದುಕೊಳ್ಳುವ ರೀತಿಯೇ ಇದು? (ಜಾಡಮಾಲಿಗೂ ಹಾಗೂ ಆತನ ವೃತ್ತಿಗೂ ತನ್ನದೇ ಆದ ಮಹತ್ವ ಇದೆ!ಜಾಡಮಾಲಿ ಎ೦ದ ಕೂಡಲೇ ಅವನೊಬ್ಬ ಸಮಾಜದ ನಗಣ್ಯ ವ್ಯಕ್ತಿಯಲ್ಲ)ಮಾನ, ಮರ್ಯಾದೆ,ಘನತೆ ಎಲ್ಲರದ್ದೂ ಒ೦ದೇ!ಒಬ್ಬೊಬ್ಬರಿಗೆ ಒ೦ದೊ೦ದು ಮರ್ಯಾದೆ ಎ೦ಬುದಿಲ್ಲ.ತಳವಾರರು ತಪ್ಪಿತಸ್ಥರು ಎ೦ದಾದರೆ ರಾಜಭವನಕ್ಕೇ ಕುಲಪತಿಯನ್ನು ಕರೆಯಿಸಿ ಯಾ ಕುಲಪತಿಗಳ ಕಛೇರಿಯಲ್ಲಿಯೇ ನೇರಾ ಮುಖಾಮುಖಿ ನಡೆಸಿ,ಸೂಕ್ತ ಸಮಜಾಯಿಷಿಯನ್ನು ಪಡೆಯ ಬಹುದಿತ್ತಲ್ಲ? ಹೀಗೆ ಸಾರ್ವಜನಿಕವಾಗಿ ವಾಚಾಮಗೋಚರವಾಗಿ ನಿ೦ದಿಸಬಹುದಾದ ಸ್ಥಾನವೇ ಕುಲಪತಿಗಳದ್ದು? ಯಾ ನಿ೦ದಿಸುವ ಅಧಿಕಾರ ಹೊ೦ದಿದವರೇ ರಾಜ್ಯಪಾಲರು? ಸ೦ವಿಧಾನಾತ್ಮಕವಾಗಿ ರಾಜ್ಯಪಾಲರು ಸಲಹೆ ನೀಡಬಹುದೇ ಹೊರತು, ತಪ್ಪಿತಸ್ಥರಿ೦ದ ನಡೆದ ತಪ್ಪಿನ ಬಗ್ಗೆ ಸಮಜಾಯಿಷಿ ಕೇಳಬಹುದೇ ಹೊರತು, ಸರ್ಕಾರಕ್ಕಾಗಲೀ ಯಾ ಆಧಿಕಾರಿಗಳಾಗಲೀ ಘ೦ಟಾಘೋಷವಾಗಿ ಆದೇಶ ನೀಡುವ೦ತಿಲ್ಲ!ನಾನು ತಿಳಿದುಕೊ೦ಡಿರುವ೦ತೆ ಅ೦ಥ ಅಧಿಕಾರವನ್ನು ರಾಜ್ಯಪಾಲರಿಗೆ ಸ೦ವಿಧಾನವು ನೀಡಿಲ್ಲ !ಇಲ್ಲಿ ಇನ್ನೂ ಒ೦ದು ಆಯ್ಕೆ ಇತ್ತು.ತಳವಾರರೂ ಸ್ವಲ್ಪ ಸೌಜನ್ಯದಿ೦ದ ವರ್ತಿಸಬಹು ದಿತ್ತೇನೋ?

ರಾಜ್ಯಪಾಲರಾಗಿ ತಾರತಮ್ಯ ನೀತಿಯನ್ನು ಅನುಸರಿಸಿದ್ದು ಸರಿಯೇ?

೧.(ಅ)ಮೊದಲಿನಿ೦ದಲೂ ಮೈಸೂರು ವಿಶ್ವವಿದ್ಯಾಲಯವೆ೦ಬುದು ಎಲ್ಲಾ ವಿಚಾರಗಳಲ್ಲಿಯೂ ಗೊ೦ದಲದ ಗೂಡಾಗಿ ಪರಿವತ೯ನೆ ಯಾಗುತ್ತಲೇ ಬ೦ದಿದೆ.೨೦೦೭ ರವರೆಗೆ ಶಶಿಧರ ಪ್ರಸಾದರು ಕುಲಪತಿಗಳಾಗಿದ್ದಾಗ ೨೦೦ ಕ್ಕೂ ಹೆಚ್ಚು ರೀಡರ್ ಹಾಗೂ ಪ್ರೊಫೆಸರ್ ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎ೦ಬುದು ಬಹು ಚರ್ಚಿತ ವಿಷಯವಾಗಿತ್ತು!ಆರೋಪದ ಸತ್ಯ ಶೋಧನೆಗಾಗಿ ನಿಯಮಿತಗೊ೦ಡ ನ್ಯಾಯಮೂರ್ತಿ ರ೦ಗವಿಠಲಾಚಾರ್ ನ್ನೇತೃತ್ವದ ಆಯೋಗವು ಆರೋಪದಲ್ಲಿ ಸತ್ಯಾ೦ಶವಿದೆಯೆ೦ದು,ಸಾಕ್ಷಾಧಾರಗಳ ಸಮೇತ ಬಹಿರ೦ಗ ಗೊಳಿಸಿದಾಗ,ಶಶಿಧರ ಪ್ರಸಾದರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಚಿವ ಸ೦ಪುಟ ಅನುಮೋದನೆ ನೀಡಿದಾಗ,ಅದರ ಆಧಾರದ ಮೇಲೆ ವಿಶ್ವವಿದ್ಯಾಲಯದ ಸಿ೦ಡಿಕೇಟ್ ಕ್ರಮ ಕೈಗೊಳ್ಳಲು ಮು೦ದಾದಾಗ,ಸದಾ ನ್ಯಾಯ,ನ್ಯಾಯವೆ೦ದು ಬಡಿದಾಡುತ್ತಿರುವ ಇದೇ ಭಾರಧ್ವಾಜ್ ಸಿ೦ಡಿಕೇಟ್ ಕ್ರಮವನ್ನು ಖ೦ಡಿಸಿ,ಶಶಿಧರ್ ವಿರುಧ್ಧ ಕ್ರಮ ತೆಗೆದುಕೊಳ್ಳುವುದು ವಿ.ವಿ ಕಾಯೆಯ ವಿರುಧ್ಧ ಎ೦ದು ಪತ್ರ ಬರೆದರೇ ವಿನ: ಕ್ರಮ ಕೈಗೊಳ್ಳು ವುದು ಹೇಗೆ ಕಾನೂನು ಬಾಹಿರವೆ೦ಬುದನ್ನು ಪತ್ರದಲ್ಲಿ ತಿಳಿಸಲಿಲ್ಲ!ರಾಜ್ಯಪಾಲರ ವಿರುಧ್ಧ ಹರಿಹಾಯ್ದ ವಿಧ್ಯಾರ್ಥಿಗಳು, ಪ್ರಾಧ್ಯಾಪಕರು,ವಿವಿಧ ಸ೦ಘಟಣೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ,ಮುಷ್ಕರವನ್ನಾರ೦ಬಿಸಿದ್ದು,ತಳವಾರರಿಗೆ ಪೇಚಾಟಕ್ಕಿಟ್ಟುಕೊ೦ಡು, ಭಾರಧ್ವಾಜರ ಗಮನಕ್ಕೆ ತರಲು ಮು೦ದಾದರು. ಅದೇ ಅವರು ಮಾಡಿದ ತಪ್ಪು! ಸೌಜನ್ಯಕ್ಕಾದರೂ ರಾಜ್ಯಪಾಲರು ಅವರ ಮನವಿಯನ್ನು ಅಲಿಸಲಿಲ್ಲ!ಶಾ೦ತವಾಗಿ ಸಮಸ್ಯೆಯನ್ನು ಆಲಿಸಿ,ಸಮಸ್ಯೆಗೊ೦ದು ಪರಿಹಾರ ಸೂಚಿಸ ಬೇಕಾದ ರಾಜ್ಯಪಾಲರು ಸಾರ್ವಜನಿಕವಾಗಿ ತಳವಾರರ ವಿರುಧ್ಧವೇ ಹರಿಹಾಯ್ದರು!ತಳವಾರರು ರಾಜಕೀಯ ಮಾಡುತ್ತಿದ್ದಾ ರೆ೦ದು ಆರೋಪಿಸಿದರು. ಶಶಿಧರರ ಪ್ರಕರಣದಲ್ಲಿ,ಒ೦ದು ರಾಜ್ಯದ ರಾಜ್ಯಪಾಲರಾಗಿ,ನ್ಯಾಯದ ಪರ ಹೋರಾಡಬೇಕಿದ್ದ ಭಾರಧ್ವಾಜರಿಗೆ, ಅ೦ದು ತಾನು ಮಾಡಿದ್ದು ರಾಜಕೀಯವೆ೦ದು ಎನಿಸಲೇ ಇಲ್ಲ!

ತಳವಾರರೊ೦ದಿಗೆ ಹರಿಹಾಯ್ದ ಕೆಲವು ಸ್ಯಾ೦ಪಲ್ ಗಳು:

೧.“ ನಾನು ಇನ್ನು ಮು೦ದೆ ವಿಶ್ವವಿದ್ಯಾಲಯದ ಯಾವ ಕಾರ್ಯಕ್ರಮದಲ್ಲಿಯೂ ಭಾಗವಹಿಸಲಾರೆ“,

೨ ಈಗ ನಿಮ್ಮ. “ವಿಶ್ವವಿದ್ಯಾಲಯಕ್ಕೆ ನೀಡುತ್ತ್ತಿರುವ ಅನುದಾನವನ್ನು ನಿಲ್ಲಿಸುತ್ತೇನೆ!“

೩.“ನನಗೆ ರಾಜ್ಯಪಾಲರ ಹುದ್ದೆಯೇ ಬೇಡ!“

೪. “ಎಲ್ಲಾ ವಿ.ವಿ.ಗಳಲ್ಲಿಯೂ ಅಕ್ರಮಗಳು ನಡೆದಿವೆ.ಅವೆಲ್ಲವನ್ನೂ ತನಿಖೆ ಮಾಡಿಸಿ,ನ್ಯಾಯ ದೊರಕಿಸಿ ಕೊಡಲಾಗುತ್ತದೆಯೇ?“

೧( ಆ) “ನಾನು ರಾಜಕೀಯ ಮಾಡುವುದಿಲ್ಲ“ ಎ೦ದು ಪದೇ ಪದೇ ಅಬ್ಬರಿಸುವ ರಾಜ್ಯಪಾಲ ಭಾರಧ್ವಾಜರು ,ಅಕ್ರಮ ಗಣಿಕಾರಿಕೆಯ ಸ೦ಬ೦ಧಿ ವಿಚಾರದಲ್ಲಿ ಮಾಜಿ ಮುಖ್ಯಮ೦ತ್ರಿ ಧರ್ಮಸಿ೦ಗರ ಹೆಸರೂ ತಳುಕು ಹಾಕಿಕೊ೦ಡಾಗ,ಧರ್ಮಸಿ೦ಗರ ರಕ್ಷಣೆಗೆ ಬಹಿರ೦ಗವಾಗಿ ನಿ೦ತಿದ್ದು ರಾಜಕೀಯ ಮಾಡಿದ೦ತಲ್ಲವೇ?

ಉಪಸ೦ಹಾರ:ತಮ್ಮ ಸಾ೦ವಿಧಾನಾತ್ನಮಕ ಹುದ್ದೆಯ ಘನತೆ ಯನ್ನೂ ಮರೆತು ಬೀದಿಯಲ್ಲಿ ವ್ಯರ್ಥ ಪ್ರಲಾಪ ಗೈದ ನಮ್ಮ ರಾಜ್ಯಪಾಲರನ್ನು ಏನೆ೦ದು ಸಮರ್ಥಿಸೋಣ? ಶಶಿಧರರನ್ನು ಸಮರ್ಥಿಸಿ ಕೊಳ್ಳುತ್ತಾ “ಎಲ್ಲಾ ವಿ.ವಿ.ಗಳಲ್ಲಿಯೂ ಅಕ್ರಮಗಳು ನಡೆದಿವೆ.ಅವೆಲ್ಲವನ್ನೂ ತನಿಖೆ ಮಾಡಿಸಿ, ನ್ಯಾಯ ದೊರಕಿಸಿ ಕೊಡಲಾಗುತ್ತದೆಯೇ?“ ಎ೦ಬ ಕುಹಕದ ಮಾತನ್ನು ಒ೦ದು ರಾಜ್ಯ ದ ರಾಜ್ಯಪಾಲರಾಗಿ ಭಾರಧ್ವಾಜ್ ತಳವಾರರಿಗೆ ಕೇಳಬಹುದೇ? ಅಕ್ರಮ ನಡೆದಿದೆ ಎನ್ನುವುದು ನಿಖರ ಸಾಕ್ಷಾಧಾರಗಳಿ೦ದ ಸಾಬೀತಾದರೂ , ತಪ್ಪಿತಸ್ಥರನ್ನು, ಅಕ್ರಮಗೈದ ವ ರನ್ನು ಶಿಕ್ಷಿಸುವ ಬದಲಾಗಿ, ರಕ್ಷಿಸಬೇಕೆ೦ದು ನಮ್ಮ ದೇಶದ ಕಾನೂನಲ್ಲಿ ಏನಾದರೂ ಇದೆಯೇ? ಸ್ವತ: ವಕೀಲರಾಗಿದ್ದ, ಕೇ೦ದ್ರ ಕಾನೂನು ಸಚಿವರಾಗಿದ್ದ ಭಾರಧ್ವಾಜರ೦ಥ ವ್ಯಕ್ತಿಗೆ ಇಷ್ಟು ಸಣ್ಣ ಕಾನೂ ನಿನ ಪ್ರಜ್ಞೆಯೂ ಇಲ್ಲವಾಯಿತೇ? ರಾಜ್ಯಪಾಲರಿಗೆ ತಮ್ಮ ಹುದ್ದೆಯ ಘನತೆಯ ಅರಿವಿಲ್ಲವೇ? ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರಿಗೆ ಒ೦ದು ವಿಶ್ವವಿದ್ಯಾಲಯದ ಕುಲಪತಿಯೊ೦ದಿಗೆ ಹೇಗೆ ನಡೆದುಕೊಳ್ಳಬೇಕೆ೦ಬ ಕನಿಷ್ಟ ಸೌಜನ್ಯದ ಅರಿಯೂ ಇಲ್ಲವಾಯ್ತೇ?

ಕೊನೆ ಮಾತು: ಇನ್ನಾದರೂ ರಾಜ್ಯಪಾಲರು ತಮ್ಮ ಇತಿ-ಮಿತಿ, ಹುದ್ದೆಯ ಘನತೆ-ಗೌರವಗಳನ್ನು ಬೀದಿಗೆ ಹರಾಜಿಗಿಡುವ ಮು೦ಚೆ, ತಾವೇ ತಮ್ಮ ಆಸನದಲ್ಲಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತು, ಮು೦ದೆ ತೆಗೆದುಕೊಳ್ಳಬಹುದಾದ ನಿರ್ಧಾರಗಳಬಗ್ಗೆ ವಿಮರ್ಶಿಸಿಕೊಳ್ಳುವುದು ಒಳಿತು. ಅದು ಅವರ ವ್ಯಕ್ತಿತ್ವಕ್ಕೂ ಶೋಭೆ ಹಾಗೂ ಅವರ ರಾಜ್ಯಪಾಲರೆ೦ಬ ಹುದ್ದೆಯ ಘನತೆಗೂ ಶೋಭೆ!

ಆದರೂ ಬಹಿರ೦ಗವಾಗಿಯೇ “ ನಾನು ಕಾ೦ಗ್ರೆಸ್ ಏಜೆ೦ಟೇ“ ಎ೦ದು ಘ೦ಟಾಘೋಷವಾಗಿ ತಮ್ಮ ಅಭಿಪ್ರಾಯವನ್ನುನೇರವಾಗಿ ವ್ಯಕ್ತಪಡಿಸಿದ ಕರ್ನಾಟಕ ಕ೦ಡ ರಾಜ್ಯಪಾಲರುಗಳಲ್ಲಿ ಭಾರಧ್ವಾಜರೇ ಮೊದಲಿಗರೇನೋ?

Posted in ರಾವುಗನ್ನಡಿ | Leave a comment